ನವದೆಹಲಿ: ದೆಹಲಿ ಬಜೆಟ್ ಅಧಿವೇಶನ ಮಾರ್ಚ್.24ರಿಂದ 26ರವರೆಗೆ ನಡೆಯಲಿದೆ ಎಂದು ಸಿಎಂ ರೇಖಾ ಗುಪ್ತಾ ತಿಳಿಸಿದ್ದಾರೆ.
ಈ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಬಜೆಟ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ತಮ್ಮ ಸಲಹೆಗಳನ್ನು ಕಳುಹಿಸಲು ಇಮೇಲ್ ಐಡಿ ಮತ್ತು ವಾಟ್ಸಾಪ್ ಸಂಖ್ಯೆಯನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ಮುಂಬರುವ ಬಜೆಟ್ ವೀಕ್ಷಿತ್ ದೆಹಲಿಯ ದೃಷ್ಟಿಕೋನದಲ್ಲಿ ಸಮಗ್ರ ಬೆಳವಣಿಗೆ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಸಮಾಜದ ವಿವಿಧ ವರ್ಗಗಳ ಒಳ ಮಾಹಿತಿಗಳಿಂದ ರೂಪಿಸಲ್ಪಡುತ್ತದೆ. ಸಮಾಜದ ಎಲ್ಲಾ ವರ್ಗಗಳ ಸಲಹೆಗಳನ್ನು ಸೇರಿಸಲು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಇನ್ನು ಮಹಿಳೆಯರಿಗೆ ಆರ್ಥಿಕ ನೆರವು, ಆರೋಗ್ಯ, ಸೇವೆಗಳ ವಿಸ್ತರಣೆ, ಸಾರ್ವಜನಿಕ ಸಾರಿಗೆ ಉತ್ತೇಜನ, ಮಾಲಿನ್ಯ ನಿಯಂತ್ರಣ, ಉದ್ಯೋಗ ಸೃಷ್ಟಿ, ಉತ್ತಮ ಶಿಕ್ಷಣ ಸೌಲಭ್ಯಗಳು, ಹಿಂದುಳಿದ ಸಬ್ಸಿಡಿ ದರದ ಪೌಷ್ಟಿಕ ಆಹಾರ, ಹಿರಿಯ ನಾಗರಿಕರ ಕಲ್ಯಾಣ ಮತ್ತು ಯಮುನಾ ನದಿಯ ಶುಚಿಗೊಳಿಸುವಿಕೆ ಸೇರಿದಂತೆ ಹಲವು ವಿಷಯಗಳು ಬಜೆಟ್‌ನಲ್ಲಿ ಇರಲಿವೆ ಎಂದರು.





