Mysore
28
scattered clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಸಂವಿಧಾನವು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಸಂವಿಧಾನವು ಪ್ರಜಾಪ್ರಭುತ್ವದ ಅಡಿಪಾಯವಾಗಿದ್ದು, ದೇಶದ ಜನರು ಸಂವಿಧಾನಿಕ ಕರ್ತವ್ಯಗಳನ್ನು ಪೂರೈಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸಂವಿಧಾನ ದಿನದಂದು ದೇಶದ ನಿವಾಸಿಗಳನ್ನು ಉದ್ದೇಶಿಸಿ ಪತ್ರ ಬರೆದಿರುವ ಅವರು, ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುವ ಜವಾಬ್ದಾರಿಯನ್ನು ಪೂರೈಸಬೇಕು. 18 ವರ್ಷ ತುಂಬಿದ ಯುವ ಮತದಾರರನ್ನು ಗೌರವಿಸುವ ಮೂಲಕ ಶಾಲಾ ಮತ್ತು ಕಾಲೇಜುಗಳು ಸಂವಿಧಾನ ದಿನವನ್ನು ಆಚರಣೆ ಮಾಡಬೇಕು ಎಂದು ಕರೆ ನೀಡಿದರು.

ಇದನ್ನು ಓದಿ : ರಾಜ್ಯದ ಎಲ್ಲಾ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ನಾಳೆ ಸಂವಿಧಾನ ದಿನ ಆಚರಣೆ ಕಡ್ಡಾಯ

ಇಂದು ನಾವೆಲ್ಲಾ ತೆಗೆದುಕೊಳ್ಳುವ ನೀತಿಗಳು ಹಾಗೂ ನಿರ್ಧಾರಗಳು ಮುಂದಿನ ಪೀಳಿಗೆಯ ಜೀವನವನ್ನು ರೂಪಿಸುತ್ತವೆ. ಭಾರತವು ವಿಕಸಿತ ಭಾರತದ ದೃಷ್ಟಿಕೋನದತ್ತ ಸಾಗುತ್ತಿದ್ದು, ನಾಗರಿಕರು ತಮ್ಮ ಕರ್ತವ್ಯಗಳನ್ನು ಪ್ರಮುಖವಾಗಿ ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂವಿಧಾನವು ನನ್ನಂತೆಯೇ ಹಲವರಿಗೆ ಕನಸು ಕಾಣುವ ಶಕ್ತಿ ಮತ್ತು ಅದರ ಕಡೆಗೆ ಕೆಲಸ ಮಾಡುವ ಬಲವನ್ನು ನೀಡಿದೆ. ತಮ್ಮಂತಹ ವ್ಯಕ್ತಿಯೊಬ್ಬರು 14 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಲು ಸಂವಿಧಾನದ ಶಕ್ತಿಯೇ ಕಾರಣ ಎಂದು ತಿಳಿಸಿದರು.

Tags:
error: Content is protected !!