Mysore
21
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ದೆಹಲಿಯಲ್ಲಿ ಕಾರು ಸ್ಫೋಟ ಪ್ರಕರಣ: ದಿನದಿಂದ ದಿನಕ್ಕೆ ಆಘಾತಕಾರಿ ಮಾಹಿತಿ ಬಹಿರಂಗ

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಫೋಟದಲ್ಲಿ 13 ಜನರು ಸಾವನ್ನಪ್ಪಿರುವ ಘಟನೆ ಬಗ್ಗೆ ತನಿಖಾ ತಂಡ ತನಿಖೆ ಚುರುಕುಗೊಳಿಸಿದ್ದು, ದಿನದಿಂದ ದಿನಕ್ಕೆ ಆಘಾತಕಾರಿ ಮಾಹಿತಿ ಬಹಿರಂಗವಾಗುತ್ತಿದೆ.

ಇದನ್ನು ಓದಿ: ಕಾರು ಬಾಂಬ್‌ ಸ್ಫೋಟದ ಹಿಂದಿರುವವರ ವಿರುದ್ಧ ಕಠಿಣ ಕ್ರಮ: ಪ್ರಧಾನಿ ನರೇಂದ್ರ ಮೋದಿ

ದೆಹಲಿ ಸ್ಫೋಟದಲ್ಲಿ ಬಳಸಿದ್ದು ಎರಡು ಕಾರಲ್ಲ, ಮೂರು ಕಾರು ಎಂಬ ಮಾಹಿತಿ ಲಭ್ಯವಾಗಿದ್ದು, ಶಂಕಿತ ಉಗ್ರ ಡಾ.ಉಮರ್‌ ನವಿಗೆ ಸೇರಿದ ಮೂರು ಕಾರುಗಳ ಜಾಲ ಈಗ ಬೆಳಕಿಗೆ ಬಂದಿದೆ.

ಫರಿದಾಬಾದ್‌ನಲ್ಲಿ ಇಕೋ ಸ್ಪೋರ್ಟ್ಸ್‌ ಕಾರು ಸಿಕ್ಕಿದ್ದು, ಬಿಳಿ ಬಣ್ಣದ ಬ್ರೆಝಾ ಕಾರಿನಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರನ್ನು ಉಗ್ರ ಚಟುವಟಿಕೆಗಳಿಗೆ ಬಳಸಿದ್ದ ಹಿನ್ನೆಲೆಯಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ.

 

Tags:
error: Content is protected !!