Mysore
18
broken clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಬಾಲಿವುಡ್‌ ನಟ ಕಪಿಲ್‌ ಶರ್ಮಾ ಸೇರಿದಂತೆ ನಾಲ್ವರಿಗೆ ಜೀವ ಬೆದರಿಕೆ: ದೂರು ದಾಖಲು

ಮುಂಬೈ : ಬಾಲಿವುಡ್‌ ನಟ ಕಪಿಲ್‌ ಶರ್ಮಾ, ರಾಜ್‌ಪಾಲ್‌ ಯಾದವ್‌ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಇ-ಮೇಲ್‌ ಮೂಲಕ ಜೀವ ಬೆದರಿಕೆ ಸಂದೇಶ ಬಂದಿರುವುದಾಗಿ ವರದಿಯಾಗಿದೆ.

ವಿಷ್ಣು ಹೆಸರಿನ ವ್ಯಕ್ತಿಯಿಂದ ಇ-ಮೇಲ್‌ ಸಂದೇಶ ಬಂದಿದ್ದು, ಬಾಲಿವುಡ್‌ ಹಾಸ್ಯ ನಟ ಕಪಿಲ್‌ ಶರ್ಮಾ, ನಟ ರಾಜ್‌ ಪಾಲ್‌ ಯಾದವ್‌, ಗಾಯಕಿ ಸುಗಂಧ ಮಿಶ್ರ ಮತ್ತು ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಅವರಿಗೆ ಬೆದರಿಕೆ ಸಂದೇಶ ಬಂದಿದೆ. ಈ ಕುರಿತು ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ.

2024ರ ಡಿ.14ರಂದು ಇ-ಮೇಲ್‌ ಸಂದೇಶ ಬಂದಿದ್ದು, ಈ ಸಂದೇಶ ಪಾಕಿಸ್ತಾನದಿಂದ ಬಂದಿದೆ ಎನ್ನಲಾಗಿದೆ.

Tags: