Mysore
29
scattered clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಯಾವ ಮುಸ್ಲಿಂ ರಾಷ್ಟ್ರವೂ ಸೇಫ್‌ ಅಲ್ಲ ಎಂದ ಬಿಜೆಪಿ ಸಂಸದೆ ಕಂಗನಾ ರಣಾವತ್‌

ನವದೆಹಲಿ: ಯಾವ ಮುಸ್ಲಿಂ ರಾಷ್ಟ್ರವೂ ಸುರಕ್ಷಿತವಲ್ಲ ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್‌ಹೇಳಿಕೆ ನೀಡಿದ್ದು, ಭಾರೀ ವಿವಾದ ಸೃಷ್ಟಿಯಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಪೋಸ್ಟ್‌ಮಾಡಿರುವ ಕಂಗನಾ ರಣಾವತ್‌ಅವರು, ಮತ್ತೊಂದು ಚರ್ಚೆಗೆ ನಾಂದಿ ಹಾಡಿದ್ದಾರೆ. ಭಾರತವು ಸುತ್ತಲಿನ ಎಲ್ಲಾ ಇಸ್ಲಾಮಿಕ್‌ಪ್ರಜಾಪ್ರಭುತ್ವ ದೇಶಗಳ ಮೂಲ ತಾಯ್ನಾಡು.

ಬಾಂಗ್ಲಾದೇಶದ ಪ್ರಧಾನಿ ಭಾರತದಲ್ಲಿ ಸುರಕ್ಷಿತ ಎಂದು ಭಾವಿಸಿ ಇಲ್ಲಿಗೆ ಆಗಮಿಸಿದ್ದಾರೆ. ಆದರೆ ಭಾರತದಲ್ಲೇ ವಾಸಿಸುವವರು ಹಿಂದೂ ರಾಷ್ಟ್ರ ಯಾಕೆ? ಏಕೆ ರಾಮರಾಜ್ಯ? ಎಂದು ಕೇಳುತ್ತಲೇ ಇರುತ್ತಾರೆ. ಈ ಪ್ರಶ್ನೆಗೆ ಈಗ ಸೂಕ್ತ ಉತ್ತರ ಸಿಕ್ಕಿದೆ ಎಂದು ಹೇಳಿದ್ದರು.

ಇನ್ನು ಮುಸ್ಲಿಂ ರಾಷ್ಟ್ರಗಳಲ್ಲಿ ಯಾರೂ ಸುರಕ್ಷಿತರಲ್ಲ. ಸ್ವತಃ ಮುಸ್ಲಿಮರು ಕೂಡ. ಆಪ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಬ್ರಿಟನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆ ದುರಾದೃಷ್ಟಕರ. ರಾಮರಾಜ್ಯದಲ್ಲಿ ಬದುಕುತ್ತಿರುವುದು ನಮ್ಮ ಅದೃಷ್ಟ. ಜೈಶ್ರೀರಾಮ್‌ಎಂದು ಕಂಗನಾ ಅಭಿಪ್ರಾಯ ಪಟ್ಟಿದ್ದಾರೆ. ಸದ್ಯ ಈ ಹೇಳಿಕೆಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.

 

 

Tags:
error: Content is protected !!