Mysore
17
clear sky

Social Media

ಗುರುವಾರ, 22 ಜನವರಿ 2026
Light
Dark

ದಿಲ್ಲಿ ಬೆನ್ನಲ್ಲೇ ಪಾಕ್‌ನಲ್ಲೂ ಬಾಂಬ್ ಸ್ಛೋಟ ; 12 ಮಂದಿ ಸಾವು

ಇಸ್ಲಾಮಾಬಾದ್ : ದೆಹಲಿ ಬಾಂಬ್ ಸ್ಛೋಟ ಪ್ರಕರಣ ಹಸಿರಾಗಿರುವಂತೆಯೇ ಅತ್ತ ಪಾಕಿಸ್ತಾನದಲ್ಲೂ ಭೀಕರ ಕಾರ್ ಬಾಂಬ್ ಸ್ಛೋಟ ಸಂಭವಿಸಿ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದಾರೆ.

ಇಸ್ಲಾಮಾಬಾದ್‌ನ ಜಿಲ್ಲಾ ನ್ಯಾಯಾಲಯದ ಹೊರಗೆ ನಡೆದ ಕಾರು ಸ್ಛೋಟದಲ್ಲಿ 12 ಮಂದಿ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಸಾವಿಗೀಡಾದವರಲ್ಲಿ ಹೆಚ್ಚಿನವರು ನ್ಯಾಯಾಲಯಕ್ಕೆ ಆಗಮಿಸಿದ್ದವರು ಅಥವಾ ಪಾದಚಾರಿಗಳು. ಸ್ಛೋಟದಿಂದ ಹಲವಾರು ವಾಹನಗಳಿಗೆ ಹಾನಿಯಾಗಿದ್ದು, ಯಾವುದೇ ಸಂಘಟನೆ ಈ ಘಟನೆಯ ಹೊಣೆ ಹೊತ್ತಿಲ್ಲ. ಪೊಲೀಸರು ಆತ್ಮಹತ್ಯಾ ದಾಳಿ ಇದಾಗಿರಬಹುದು ಎಂದು ಶಂಕಿಸಿದ್ದಾರೆ.

ಇದನ್ನೂ ಓದಿ:-ಸಿದ್ದಾಪುರ | ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ಚುರುಕು

ಪೊಲೀಸರು ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ಸುತ್ತುವರಿದರು. ಸ್ಛೋಟ ಶಬ್ದವು ನಗರದಿಂದ ಮೈಲಿಗಳಷ್ಟು ದೂರದವರೆಗೆ ಕೇಳಿಬಂದಿದೆ. ಸ್ಛೋಟದ ತೀವ್ರತೆಗೆ ನ್ಯಾಯಾಲಯದ ಹೊರಗೆ ನಿಲ್ಲಿಸಿದ್ದ ಹಲವಾರು ವಾಹನಗಳು ಸಹ ಹಾನಿಗೊಳಗಾಗಿವೆ. ನ್ಯಾಯಾಲಯಕ್ಕೆ ಹಾಜರಾಗಿದ್ದವರು ಹಾಗೂ ಪಾದಚಾರಿಗಳು ಮೃತರು ಮತ್ತು ಗಾಯಾಳುಗಳಲ್ಲಿ ಸೇರಿದ್ದಾರೆ. ಗಾಯಗೊಂಡವರ ಪೈಕಿ ಹೆಚ್ಚಿನ ಜನರು ವಕೀಲರು ಮತ್ತು ಕೋರ್ಟ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಎನ್ನಲಾಗಿದೆ.

Tags:
error: Content is protected !!