ಹೊಸದಿಲ್ಲಿ: ಡಿನೋಟಿಫಿಕೇಶನ್ ಮತ್ತು ಶ್ರೀ ಸಾಯಿ ಮಿನರಲ್ಸ್ ಪ್ರಕರಣದಲ್ಲಿ ಹೇಗಾದರೂ ಮಾಡಿ ಒಮ್ಮೆಯಾದರೂ ನನ್ನನ್ನು ಜೈಲಿಗೆ ಕಳುಹಿಸಬೇಕು ಎಂದು ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ಸಂಚು ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ದೆಹಲಿಯಲ್ಲಿ ಇಂದು (ಅಕ್ಟೋಬರ್.1) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಡಿಜಿಪಿ ಎಂ.ಚಂದ್ರಶೇಖರ್ ಅವರು ಒಂದು ದಿನವಾದರೂ ನನ್ನನ್ನು ಜೈಲಿಗೆ ಕಳುಹಿಸಬೇಕು ಎಂಬ ಆಕ್ಷೇಪವನ್ನು ನಾನು ಗಮನಿಸಿದ್ದೇನೆ. ಚಾರ್ಜ್‌ಶೀಟ್‌ನಲ್ಲಿ ನನ್ನ ಹೆಸರು ಸೇರಿಸಲು ರಾಜ್ಯಪಾಲರ ಬಳಿ ಹೋಗಿದ್ದಾರೆ. ನಾನು ಜಾಮೀನು ಪಡೆದಿದ್ದು ತಪ್ಪು ಮಾಡಿದ್ದೇನೆ ಎಂದು ಅಲ್ಲ. ಅದರ ಬದಲಾಗಿ ನನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರು ಆ ಕಾರಣಕ್ಕಾಗಿ ಜಾಮೀನು ಪಡೆದಿದ್ದೇನೆ. ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೋ ಒಬ್ಬ ಅಧಿಕಾರಿ ನನ್ನ ಮೇಲೆ ಕ್ರಿಮಿನಲ್ ಎಂಬ ಪದ ಬಳಕೆ ಮಾಡಿದ್ದಾರೆ ಎಂದು ವಾಗಾಳಿ ನಡೆಸಿದರು.
ರಾಜಕೀಯ ಆರೋಪಗಳಲ್ಲಿ ಯಾರು ನನ್ನನ್ನು ಏನು ಮಾಡಲಾಗದು: ಎಚ್.ಡಿ.ಕುಮಾರಸ್ವಾಮಿ
ರಾಜ್ಯದಲ್ಲಿ ರಾಜಕೀಯ ಪ್ರೇರಿತ ಕೇಸ್‌ನಲ್ಲಿ ನಿರಾಪರಾಧಿಗಳನ್ನು ಅಪರಾಧಿ ಮಾಡಿ, ರಾಜಕಾರಣದ ಆರೋಪಗಳ ಮೂಲಕ ನನ್ನನ್ನು ಏನು ಮಾಡಲು ಸಾಧ್ಯವಿಲ್ಲ. ನಾನು ನನ್ನ ಅಧಿಕಾರವನ್ನು ಎಂದಿಗೂ ದುರುಪಯೋಗಪಡಿಸಿಕೊಂಡು ಅಧಿಕಾರಿಗಳನ್ನು ಬೆದರಿಸಿದವನಲ್ಲ. ರಾಜಭವನದಲ್ಲಿ ಮಾಹಿತಿ ಸೋರಿಕೆಯ ತನಿಖೆ ವಿಚಾರವಾಗಿ ನಾನು ಅಧಿಕಾರಿಯನ್ನು ಪ್ರಶ್ನೆ ಮಾಡಿದ್ದೇನೆ. ಇದರ ಹೊರತಾಗಿ ನಾನು ನನ್ನ ಕೇಸ್‌ಗೆ ಸಂಬಂಧಪಟ್ಟಂತೆ ಆ ಅಧಿಕಾರಿಯನ್ನು ಪ್ರಶ್ನಿಸಿಲ್ಲ. ರಾಜ್ಯಪಾಲರ ಕಚೇರಿಗೆ ಪತ್ರ ಬರೆದು ಅವಮಾನ ಮಾಡಿದ್ದ ಒಬ್ಬ ಜವಾಬ್ದಾರಿಯುತ ಅಧಿಕಾರಿಯ ಉದ್ಘಟತನವನ್ನು ಪ್ರಶ್ನೆ ಮಾಡಿದ್ದೇನೆ ಅಷ್ಟೇ. ನನಗೂ ನನ್ನ ಇತಿಮಿತಿಗಳ ಅರಿವು ಇದೆ ಎಂದು ತಿಳಿಸಿದರು.
ದೇಶದಲ್ಲಿ ಅಕ್ರಮ ಹಣ ಸಂಪಾದನೆ ಮಾಡುವವರಿಗೆ ರಕ್ಷಣೆ ನೀಡಿ ಎಣದು ನಿಮ್ಮನ್ನು ಐಪಿಎಸ್ ಆಫೀಸರ್ ಮಾಡಿದ್ದಾರಾ? ನಾನು ಜಾಮೀನು ತೆಗೆದುಕೊಂಡಿರುವುದು ನಿಜಾ ಆದರೆ ತನಿಖೆ ನಡೆಸಬೇಡಿ ಎಂದು ಹೇಳಿಲ್ಲ. ನನ್ನ ವಿರುದ್ಧ ತನಿಖೆ ನಡೆಸುತ್ತಿರುವ ಅಧಿಕಾರಿ ಯಾವ ಹಿನ್ನೆಲೆಯಿಂದ ಬಂದವರು? ಅಧಿಕಾರಿ ವಿರುದ್ಧವೇ ಕೇಸ್ ದಾಖಲಾಗಿದೆ. ಆರೋಪಿ ನಂ.2 ಆಗಿ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ. ನಾನು ಯಾರಿಗೂ ರಕ್ಷಣೆ ನೀಡಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.