Mysore
18
clear sky

Social Media

ಮಂಗಳವಾರ, 18 ಫೆಬ್ರವರಿ 2025
Light
Dark

ಕೇರಳದಲ್ಲಿ ಅಪಘಾತ: ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್‌ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಕೇರಳ/ಕೊಟ್ಟಾಯಂ: ಇಲ್ಲಿನ ಸಮೀಪದ ಪಾಲ ಎಂಬಲ್ಲಿನ ರಾಮಪುರದಲ್ಲಿ ನಿನ್ನೆ ತಡರಾತ್ರಿ ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್‌ ಅವರ ಕಾರು ಅಪಘಾತಕ್ಕೀಡಾಗಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ್‌ ಮೂಲತಃ ಮಂಗಳೂರಿನವರಾಗಿದ್ದು, ಕೊಚ್ಚಿಯಿಂದ ಗೋವಾ ಮೂಲಕ ಬೆಳಗಾವಿ ಸಮಾವೇಶಕ್ಕೆ ತೆರಳುತ್ತಿದ್ದರು. ಈ ವೇಳೆ ನಿನ್ನೆ(ಜನವರಿ.19) ತಡ ರಾತ್ರಿ ಪಾಲ ಸಮೀಪದಲ್ಲಿ ಮೋಹನ್‌ ಅವರ ಕಾರಿಗೆ ಯಾವುದು ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ.

ಈ ಅಪಘಾತದಲ್ಲಿ ಮೋಹನ್‌ ಅವರ ಕಾಲಿಗೆ ಗಂಭೀರ ಗಾಯವಾಗಿದ್ದು, ಪಾಲ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕೊಚ್ಚಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲದೇ ಅವರ ಆರೈಕೆಯ ಉಸ್ತುವಾರಿಯನ್ನು ಸ್ಥಳೀಯ ಕಾಂಗ್ರೆಸ್‌ ಮುಖಂಡರು ವಹಿಸಿಕೊಳ್ಳಲಾಗಿದೆ.

Tags: