ಹೊಸದಿಲ್ಲಿ: ದೇಶಾದ್ಯಂತ ಸೈಬರ್ ಅಪರಾಧಗಳಲ್ಲಿ ಭಾಗಿಯಾಗಿದ್ದ ಸುಮಾರು 6.69 ಲಕ್ಷ ಸಿಮ್‌ಕಾರ್ಡ್ ಗಳನ್ನು ಮತ್ತು 1.32 ಲಕ್ಷ ಐಎಮ್‌ಐಎಗಳನ್ನು ನಿರ್ಬಂಧಿಸಿರುವುದಾಗಿ ಗೃಹ ಖಾತೆ ಸಹಾಯಕ ಸಚಿವ ಬಂಡಿ ಸಂಜಯ್ ಕುಮಾರ್ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ.
ಭಾರತೀಯ ಮೊಬೈಲ್ ಸಂಖ್ಯೆಗಳನ್ನು ಬಳಸಿ ಅಂತಾರಾಷ್ಟ್ರೀಯ ಸೈಬರ್ ಕಳ್ಳರು ಜನರಿಗೆ ನಕಲಿ ಕರೆ ಮಾಡುತ್ತಿದ್ದಾರೆ.
ಆದರೆ, ಅಂತಹ ಸಂಖ್ಯೆಗಳನ್ನು ನಿರ್ಬಂಧಿಸಲು ಸರ್ಕಾರ ಹಾಗೂ ಟೆಲಿಕಾಂ ಕಂಪೆನಿಗಳು ಸೂಕ್ತ ವ್ಯವಸ್ಥೆ ನಿರ್ಮಿಸಿವೆ. 2024ರ ನವೆಂಬರ್ 15 ರವರೆಗೆ ಪೊಲೀಸರ ವರದಿಯನುಸಾರ ಒಟ್ಟು 6.69 ಲಕ್ಷ ಸಿಮ್ ನಿರ್ಬಂಧಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.