ಮಹಾರಾಷ್ಟ್ರ: ಉಕ್ಕು ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು 22 ಕಾರ್ಮಿಕರಿಗೆ ಗಾಯಗಳಾಗಿರುವ ಘಟನೆ ಮಹಾರಾಷ್ಟ್ರದ ಜಲ್ನಾ ನಗರದ ಎಂಐಡಿಸಿ ಪ್ರದೇಶದಲ್ಲಿನ ಉಕ್ಕು ಕಾರ್ಖಾನೆಯಲ್ಲಿ ಶನಿವಾರ (ಆ.24) ನಡೆದಿದೆ.
ಗಜಕೇಸರಿ ಸ್ಟೀಲ್ ಮಿಲ್‌ನ ಬಾಯ್ಲರ್ ಇಂದು ಮದ್ಯಾಹ್ನ ಸ್ಫೋಟಗೊಂಡಿದ್ದು, ಇದರಲ್ಲಿ ಗಾಯಗೊಂಡ 22 ಕಾರ್ಮಿಕರ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಛತ್ರಪತಿ ಸಂಭಾಜಿನಗರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್ಪಿ ಅಜಯ್ ಕುಮಾರ್ ಬನ್ಸಾಲ್ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಸ್ಥಳದಲ್ಲಿದ್ದ ಕಾರ್ಮಿಕರಿಂದ ಅಗತ್ಯ ಮಾಹಿತಿ ಕಲೆಹಾಕುತ್ತಿದ್ದು, ತಪ್ಪು ಕಂಡುಬಂದರೆ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.