ಚಂಡೀಗಢ : ನಂಬಲು ಅಸಾಧ್ಯ ಎನಿಸಿದರೂ ಇದು ಸತ್ಯ. 21 ವರ್ಷದ ಯುವಕನೊಬ್ಬ 65 ವರ್ಷದ ಅಜ್ಜಿಯನ್ನು ಮದುವೆಯಾಗಿರುವ ವಿಲಕ್ಷಣ ಘಟನೆ ಹರಿಯಾಣದಲ್ಲಿ ನಡೆದಿದೆ.
ಹರಿಯಾಣದ ಮೊಹಮ್ಮದ್ ಇರ್ಫಾನ್(21) ಆತನ ಅಜ್ಜಿಯೇ ಆದ ಸುಲ್ತಾನಾ ಖತೂನ್(65) ಎಂಬ ವೃದ್ಧೆಯನ್ನೇ ಮದುವೆಯಾಗಿ ಎಲ್ಲರನ್ನು ದಿಗ್ಬ್ರಾಂತಗೊಳಿಸಿದ್ದಾನೆ. ಪತಿ ಸಾವನ್ನಪ್ಪಿದ ಬಳಿಕ ಜೀವನದಲ್ಲಿ ಸುಲ್ತಾನಾ ಖತೂನ್ ಒಂಟಿಯಾಗಿದ್ದರು. ಈ ವೇಳೆ ಮೊಹಮ್ಮದ್ ಇರ್ಪಾನ್ ಅಜ್ಜಿ ಸುಲ್ತಾನಾ ಖತೂನ್ ಜೊತೆ ಇದ್ದು ಕಾಳಜಿ ವಹಿಸುತ್ತಿದ್ದ. ಇದೇ ಬಾಂಧವ್ಯ ಕೊನೆಗೆ ಸದೃಢವಾಗಿ ಮದುವೆಯಾಗುವ ದುರಂತಕ್ಕೆ ತಂದು ನಿಲ್ಲಿಸಿದೆ. ಈ ಇಬ್ಬರ ಮದುವೆಗೆ ಜನರು ವಿರೋಧ ವ್ಯಕ್ತಪಡಿಸಿದ್ದು, ಸಮಾಜದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ವಿಲಕ್ಷಣ, ಅಸಮಾನ್ಯ ವಿವಾಹಗಳು ಈ ಹಿಂದೆಯೂ ವರದಿಯಾಗಿದೆ. 2018ರಲ್ಲಿ 27 ವರ್ಷದ ಹರಿಯಾಣದ ವ್ಯಕ್ತಿಯೊಬ್ಬ ಫೇಸ್‍ಬುಕ್‍ನಲ್ಲಿ ಪರಿಚಯವಾದ 65 ವರ್ಷದ ಅಮೇರಿಕನ್ ಮಹಿಳೆಯನ್ನು ವಿವಾಹವಾಗಿದ್ದ. ಈ ಇಬ್ಬರ ಮದುವೆ ಬಗ್ಗೆಯೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದರೂ ಪ್ರವೀಣ್, ಮಹಿಳೆ ಕರೆನ್‍ನನ್ನು ಭೇಟಿಯಾಗಲು ಯುಎಸ್ ವೀಸಾಕ್ಕೆ ಅರ್ಜಿ ಸಲ್ಲಿಸುವುದರೊಂದಿಗೆ ತಮ್ಮ ಸಂಬಂಧವನ್ನು ಮುಂದುವರಿಸಿದ್ದ.





