Mysore
24
scattered clouds

Social Media

ಮಂಗಳವಾರ, 03 ಡಿಸೆಂಬರ್ 2024
Light
Dark

ಸಭ್ಯತೆ ಸೌಜನ್ಯ ಸಂಯಮ ಕಲಿಸುವ ಪಾಠಶಾಲೆ ಬೇಕಿದೆ

ಸೂಕ್ಷ್ಮ ಸಂವೇದನೆಯಿಲ್ಲದ ನಾಯಕರು-ಮಾಧ್ಯಮಗಳು ಸಮಾಜಕ್ಕೆ ನೀಡುವ ಸಂದೇಶವೇನು ?

ನಾ ದಿವಾಕರ

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ವಿವಿಧ ವಿಚಾರಧಾರೆಗಳಿಂದ ಸ್ವಾಭಾವಿಕರಾಗಿ ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ನಡೆದ ಹೋರಾಟಗಳಲ್ಲಿ ತೊಡಗಿದ್ದ ಮತ್ತು ಈ ಹೋರಾಟಗಳ ಮುಂಚೂಣಿಯಲ್ಲಿದ್ದ ನಾಯಕರಲ್ಲಿ ಒಂದು ಸಮಾನ ಎಳೆಯನು ಕಾಣಬಹುದಾದರೆ ಅದು ಸಾರ್ವಜನಿಕ ಜೀವನದಲ್ಲಿ ಅವರು ಅಳವಡಿಸಿಕೊಂಡ ಸಭ್ಯತೆ, ಸೌಜನ್ಯ, ಸಂಯಮ ಮತ್ತು ಸಾಮಾಜಿಕ ಸೂಕ್ಷ್ಮ-ಸಂವೇದನೆ. ಭಾರತದ ನೆಲ ಸಂಸ್ಕೃತಿಯಲ್ಲೇ ಸಾರ್ವಜನಿಕ ವಲಯದಲ್ಲಿ ಆಡುವ ಮಾತುಗಳಿಗೆ ಒಂದು ಸಂಯಮ-ಸೌಜನ್ಯದ ಸ್ಪರ್ಶ, ಸಂವೇದನೆಯ ಆಯಾಮ ಇರುವುದನ್ನು ಇತಿಹಾಸದುದ್ದಕ್ಕೂ ಗರ್ಮಸಬಹುದು. ಆಧುನಿಕ ತಂತ್ರಜ್ಞಾನದ ಸಂವಹನ ಸಾಧನಗಳು ಜಗತ್ತಿನ ಅಪ್ಪಮೂಲೆಗಳನ್ನೂ ಒಟ್ಟಿಗೆ ಸಂಪರ್ಕಿಸಲು ಸಾಧ್ಯವಾಗುವಂತಹ ಪರಿಕರಗಳನ್ನು ಒದಗಿಸಿವೆ. ಈ ವಾತಾವರಣದಲ್ಲಿ ಒಬ್ಬ ವ್ಯಕ್ತಿಯ ಮಾತುಗಳು ಕ್ಷಣ ಮಾತ್ರದಲ್ಲಿ ಲಕ್ಷಾಂತರ ಜನರನ್ನು ತಲುಪುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಸಾರ್ವಜನಿಕ ವಲಯದಲ್ಲಿ ಅಥವಾ ಆಂತರಿಕ ಸಮಾಜದಲ್ಲೂ ವ್ಯಕ್ತಿ ಆಡುವ ಪ್ರತಿಯೊಂದು ಮಾತು ಕೂಡ ಶ್ರವಣಯೋಗ್ಯವಷ್ಟೇ ಅಲ್ಲ ಮನಸ್ಸಿಗೆ ಮುದ ನೀಡುವಂತೆಯೂ ಇರಬೇಕಾಗುತ್ತದೆ.

ಇಲ್ಲಿ ನಮಗೆ ಸಭ್ಯತೆ, ಸೌಜನ್ಯ ಮತ್ತು ಸಂಯಮದ ಮಾತುಗಳು ಮುಖ್ಯವಾಗುತ್ತವೆ. ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳಲ್ಲಿ ಈ ಲಕ್ಷಣಗಳನ್ನು ಮೈಗೂಡಿಸಿಕೊಳ್ಳುವಂತಹ ಶೈಕ್ಷಣಿಕ-ಬೌದ್ಧಿಕ ವಾತಾವರಣ ಸೃಷ್ಟಿಸುವುದು ಸಮಾಜದ ಪ್ರಥಮ ಆದ್ಯತೆಯಾಗಬೇಕಾಗುತ್ತದೆ. ಸಾಹಿತ್ಯಕವಾಗಿ ಇದನ್ನು ಆಗುಮಾಡುವಂತಹ ವಿಪುಲವಾದ ಅಕ್ಷರ ಭಂಡಾರವೇ ನಮ್ಮ ನಡುವೆ ಇದೆ. ಇದನ್ನು ಮಕ್ಕಳಿಗೆ ತಲುಪಿಸುವ ಜವಾಬ್ದಾರಿ ಇರುವ ಬೋಧಕ ವೃಂದ ಇಂದಿಗೂ ಈ ಅಲಿಖಿತ ಸಂಹಿತೆಗಳನ್ನು ಒಂದು ಹ೦ಶದವರೆಗೆ ಪಾಲಿಸುತ್ತಾ ಬಂದಿದೆ. ಆದರೆ ಇಂತಹ ವಾತಾವರಣದಲ್ಲಿ ಸುದ್ದಿ ಪ್ರಸರಣ ಮಾಡುವ ವಿದ್ಯುನ್ಮಾನ ಮಾಧ್ಯಮಗಳು ಬಳಸುವ ಮತ್ತು ನಿತ್ಯ ಜನಸಂಪರ್ಕದಲ್ಲಿರುವ ರಾಜಕೀಯ ನಾಯಕರು ಆಡುವ ಮಾತುಗಳಲ್ಲಿ ಸೌಜನ್ಯ, ಸಂಯಮ ಮತ್ತು ಸಭ್ಯತ ಇರಬೇಕಾದದ್ದು ಅತ್ಯವಶ್ಯವಲ್ಲವೇ? ದುರಾದೃಷ್ಟವಶಾತ್ ಈ ಎರಡೂ ಕಡೆಯಲ್ಲಿ ಈ ಲಕ್ಷಣಗಳು ಮರೆಯಾಗಿದೆ. ಸಾರ್ವಜನಿಕ ಸುದ್ದಿಗಳಿಗೂ, ಕ್ರೈಂ ನ್ಯೂಸ್‌ ನಲ್ಲಿ ಪ್ರಸಾರವಾಗುವ ವಾರ್ತೆಗಳಿಗೂ ವ್ಯತ್ಯಾಸವೇ ಇಲ್ಲದಂತೆ ಬಳಸಲ್ಪಡುವ ಪರಿಭಾಷೆ ಪ್ರಶಾಂತ ವಾತಾವರಣವನ್ನೂ ಕಲುಷಿತಗೊಳಿಸುವಂತಿರುತ್ತದೆ.

ರಾಜಕೀಯ ಪರಿಭಾಷೆಯ ಔನ್ನತ್ಯ: ರಾಜಕೀಯ ವಲಯದಲ್ಲಿ ಈ ವಿಕೃತಿಯ ಪರಾಕಾಷ್ಠೆಯನ್ನು ಕಾಣುತ್ತಿದ್ದೇವೆ. ಸ್ವಾತಂತ್ರ್ಯಪೂರ್ವದಲ್ಲಿ ಭಾರತ ಎಂದೂ ಏಕಾಭಿಪ್ರಾಯದ ದೇಹ ಆಗಿರಲಿಲ್ಲ. ತತ್ವ ಸಿದ್ಧಾಂತ ಮತ್ತು ಹೋರಾಟದ ಮಾರ್ಗಗಳಲ್ಲಿದ್ದ ವೈವಿಧ್ಯತೆಯೇ ಅಂದಿನ ರಾಜಕೀಯ ನೇಕಾರರ ನಡುವತಾತ್ಮರ ಭಿನ್ನಾಭಿಪ್ರಾಯಗಳಿದ್ದವು. ಗಾಂಧಿVs ಅಂಬೇಡ್ಕರ್, ಚರ್ಚೆಗಳಲ್ಲೂ ಇರುತ್ತಿದ್ದವು. ಗಾಂಧಿ ಅಂಬೇಡ್ಕರ ಆದಿಯಾಗಿ ಬಹುಪಾಲು ನೇತಾರರ ನಡುವೆ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದವು. ನೆಹರೂ Vs ಜಿಲ್ಲಾ ಪಟೇಲ್ Vs ಜಿಲ್ಲಾ ಹೀಗೆ ಸಾರ್ವಜನಿಕ ಚರ್ಚೆಗಳನ್ನು ಭೇದಿಸುತ್ತಾ ಹೋದಂತೆ ಅಲ್ಲಿ ನಮಗೆ ಕಾಣುವುದು ಸಂಯಮ ಮತ್ತು ಸೌಜನ್ಯಯುತ ಭಾಷೆಯ ಒಂದು ಆರೋಗ್ಯಕರ ಸಂವಾದ.

1937ರಲ್ಲಿ ದೇಶದ ವಿಭಜನೆಯ ಸುತ್ತ ಚರ್ಚೆಗಳು ಆರಂಭವಾದ ನಂತರ ಅತಿ ಹೆಚ್ಚು ಟೀಕೆಗೊಳಗಾದ ವ್ಯಕ್ತಿ ಎಂದರೆ ಪಾಕಿಸ್ತಾನದ ಪ್ರವರ್ಶಕ ಮೊಹಮ್ಮದ್ ಅಲಿ ಜಿನ್ಹಾ, ತಮ್ಮ Pakistan or the Partition of India ಕೃತಿಯಲ್ಲಿ ಈ ವಿಚಾರವನ್ನೇ ಸಮಗ್ರವಾಗಿ ವಿಶ್ಲೇಷಿಸುವ ಡಾ.ಬಿ.ಆರ್. ಅಂಬೇಡ್ಕರ್ ಜಿನ್ಹಾ ಅವರ ಬಗ್ಗೆ ಪ್ರಚಲಿತವಾಗಿದ್ದ ಸಾರ್ವಜನಿಕ ಅಭಿಪ್ರಾಯಗಳನ್ನು ಕುರಿತು ಒಂದು ಕಡೆ ಹೀಗೆ ಹೇಳುತ್ತಾರೆ: “ಸೈದ್ಧಾಂತಿಕವಾಗಿ ಮನ್ವಂತರಕ್ಕೊಳಗಾಗಿದ್ದ ಜಿನ್ಹಾ ಅವರನ್ನು ಅವರ ಪರಮಶತ್ರುಗಳೂ ಬ್ರಿಟಿಷರ ಕೈಗೊಂಬೆ ಎಂದು ಭಾವಿಸಲು ಸಾಧ್ಯವಿಲ್ಲ… ಅದೇ ವೇಳೆ, ಯಾವುದೇ ಪ್ರಲೋಭನೆಗೊಳಗಾಗದ ರಾಜಕೀಯ ನಾಯಕರು ಭಾರತದಲ್ಲಿ ಇರುವುದೇ ಆದರೆ, ಆ ಗುಣವಿಶೇಷಣವನ್ನು ಅವರಿಗೆ ಸಮರ್ಥನೀಯವಾಗಿ ಅನ್ವಯಿಸಬಹುದು…’ (ಪುಟ 383-384 Pakistan or the Partition of India). ಇದು ವಿರೋಧಿಯನ್ನು ಗೌರವದಿಂದ ಕಾಣುವ ಒಂದು ಅತ್ಯುನ್ನತ ನಿದರ್ಶನ.

ಸ್ವತಂತ್ರ ಭಾರತದ ಆರಂಭದ ದಿನಗಳಲ್ಲಿ ಸಂಸತ್ತಿನಲ್ಲಿ ನಡೆಯುತ್ತಿದ್ದ ಚರ್ಚೆಗಳನ್ನು ಗಮನಿಸಿದರೂ ಇದು ಸ್ಪಷ್ಟವಾಗುತ್ತದೆ. ಲೋಹಿಯಾ Vs ನೆಹರೂ, ಅಂಬೇಡ್ಕರ್ Vs ನೆಹರೂ ಇವರ ನಡುವೆ ನಡೆಯುತ್ತಿದ್ದ ಚರ್ಚೆಗಳು, ಓಮ್ ಪ್ರಕಾಶ್ ತ್ಯಾಗಿ, ಅಟಲ್ ಬಿಹಾರಿ ವಾಜಪೇಯಿ, ಆಚಾರ್ಯ ಕೃಪಲಾನಿ ಮುಂತಾದ ನಾಯಕರು ಸಂಸದೀಯ ಚರ್ಚೆಗಳಲ್ಲಿ ಮಂಡಿಸುತ್ತಿದ್ದ ವಿಚಾರಗಳು ಸರ್ಕಾರದ ಕಾರ್ಯವೈಖರಿಯವನ್ನು ಖಂಡತುಂಡವಾಗಿ ಟೀಕಿಸುವಂತಿದ್ದರೂ, ಸಾರ್ವಜನಿಕವಾಗಿ ಅಥವಾ ಸಂಸತ್ತಿನ ಒಳಗೆ ಈ ನಾಯಕರು ಬಳಸುತ್ತಿದ್ದ ಭಾಷೆ-ಪರಿಭಾಷೆ ಎಂದೂ ಸಂಯಮದ ಗೆರೆ ದಾಟುತ್ತಿರಲಿಲ್ಲ. ಈ ನಿದರ್ಶನಗಳೇ ಅಂದಿನ ಭಾರತದ ರಾಜಕೀಯ ಪರಿಭಾಷೆಯನ್ನು ನಮ್ಮ ಮುಂದೆ ತೆರೆದಿಡುತ್ತವೆ. ತನ್ನ ರಾಜಕೀಯ ವಿರೋಧಿಯನ್ನು ಶತ್ರು ಎಂದು ಭಾವಿಸದೆ, ವಸ್ತುನಿಷ್ಠವಾಗಿ ಅವರ ತಾತ್ವಿಕತೆಯನ್ನು ನಿಷ್ಕರ್ಷೆಗೊಳಪಡಿಸುವ ಮೂಲಕ, ಅಧಿಕಾರ ರಾಜಕಾರಣಕ್ಕೂ ವ್ಯಕ್ತಿಗತ ಸಾರ್ವಜನಿಕ ಬದುಕಿಗೂ ನಡುವೆ ಇರುವ ಅಂತರವನ್ನು ಮನಗಂಡು ಸೈದ್ಧಾಂತಿಕವಾಗಿ ಭಿನ್ನ ವಿಚಾರಧಾರೆಯನ್ನು ಜನತೆಯ ಮುಂದಿಡುವ ಈ ಪರಂಪರೆ ಏನಾಯಿತು?

ವರ್ತಮಾನದ ಅವಲಕ್ಷಣಗಳು: ಇಂದಿನ ರಾಜಕೀಯ ನಾಯಕರ ಸುಳ್ಳು ತಟವಟಗಳು, ಚರಿತ್ರೆಯ ತಪ್ಪು ವ್ಯಾಖ್ಯಾನಗಳು, ಸಂಸ್ಕೃತಿಯ ಅಪವಾಖ್ಯಾನಗಳು, ಪರಸ್ಪರ ದೋಷಾರೋಪಣೆಗಳು ಹಾಗೂ ವ್ಯಯಕ್ತಿಕ ನೆಲೆಯಲ್ಲಿ ಕನ್ನೆದುರಿನ ವ್ಯಕ್ತಿಯ ಭೌತಿಕ ಅಸ್ತಿತ್ವವನ್ನೇ ಹೀಯಾಳಿಸುವಂತಹ ಮಾತುಗಳು ಸಾರ್ವಜನಿಕ ಸಂಕಥನದ ಅವಿಚ್ಛಿನ್ನ ಭಾಗವಾಗಿದ್ದಾದರೂ ಹೇಗೆ? ವಾಟ್ಸಾಪ್ ವಿಶ್ವವಿದ್ಯಾಲಯದ ಹೊರಗಿನ ಯಾವುದೇ ಚರಿತ್ರೆಯ ‌ವಿದ್ಯಾರ್ಥಿಗೆ ಈ ಪ್ರಶ್ನೆ ಕಾಡಲೇಬೇಕು. ತಮ್ಮ ವೈಯಕ್ತಿಕ ವರ್ಚಸ್ಸನ್ನೂ ಲೆಕ್ಕಿಸದೇ
ಎದುರಿಗಿರುವ ವಿರೋಧಿಯ ವ್ಯಕ್ತಿಗಳ ಘನತೆಯನ್ನೂ ಲೆಕ್ಕಿಸದ ರಾಜಕೀ ನಾಯಕರು ಆಡುವ ಮಾತುಗಳು ಸಮಾಜದ ಮೇಲೆ, ವಿಶೇಷವಾಗಿ ಯುವ ಸಂಕುಲದ ಮೇಲೆ ಎಂತಹ ಋಣಾತ್ಮಕ ಪರಿಣಾಮ ಬೀರಬಹುದು ಎಂಬ ಕನಿಷ್ಠ ಪರಿವೆಯಾದರೂ ಇರಬೇಕಲ್ಲವೇ?

ಆದರೆ ಇದನ್ನು ಕಾಣಲಾಗುತ್ತಿಲ್ಲ. ಇದಕ್ಕೆ ಕಾರಣ ಅಧಿಕಾರ ರಾಜಕಾರಣ ಸೃಷ್ಟಿಸಿರುವ ಒಂದು ಸುರಕ್ಷಿತ ತಾಣ ಅದು ಪ್ರಚೋದಿಸುವ ಶ್ರೇಷ್ಠತೆಯ ಅಹಮಿಕೆ, ಜನರ ಕೈಗೇ ಅಧಿಕಾರ ಕೊಡುತ್ತೇವೆ ಎಂಬ ಸಾಂವಿಧಾನಿಕ ವಚನ ಪ್ರಮಾಣಗಳ ಹೊರತಾಗಿಯೂ ಸತಂತ್ರ ಭಾರತದ ಅಧಿಕಾರ ರಾಜಕಾರಣವು ಈ ಅಹಮಿಕೆಗೆ ಕಾಸ್ತಿಕ ಹೊದಿಕೆಯನ್ನೂ ಹೊದಿಸಿದೆ, ಈ ಬೆಳವಣಿಗೆಗೂ ಮೇಲೆ ಉಲ್ಲೇಖಿಸಿದ ಅಂಬೇಡ್ಕರ್ ಅವರ ಕೃತಿಯಲ್ಲೇ ಉತ್ತರ ಇದೆ. ಅಂಬೇಡ್ಕರ್ ಉಲ್ಲೇಖಿಸುವ ಖ್ಯಾತ ತತ್ವಶಾಸ್ತ್ರಜ್ಞ ರೂಸೋ ಅವರ ಈ ಮಾತುಗಳು ಗಮನಾರ್ಹ : “ವ್ಯಕ್ತಿಯೊಬ್ಬ ಎಷ್ಟೇ ಬಲಶಾಲಿಯಾದರೂ ಸದಾ ಕಾಲವೂ ಯಜಮಾನಿಕೆಯನ್ನು ಸಾಧಿಸಲಾಗುವುದಿಲ್ಲ, ತನ್ನ ಆ ಶಕ್ತಿಯನ್ನು ವ್ಯಕ್ತಿಗತವಾಗಿ ವಿಧೇಯತೆಯನ್ನು ಕರ್ತವ್ಯವನ್ನಾಗಿ ಪರಿವರ್ತಿಸಿದಾಗ ಮಾತ್ರ ಇದು ಸಾಧ್ಯ” . ಈ ಮಾತುಗಳನ್ನು ಉಲ್ಲೇಖಿಸುವ ಮೂಲಕ ಅಂಬೇಡ್ಕರ್ ವರ್ತಮಾನ ಭಾರತದ ರಾಜಕೀಯ ಪರಿಭಾಷೆಗೂ ಕಾರಣಗಳನ್ನು ಒದಗಿಸುತ್ತಾರೆ.
( ಪುಟ 438 ಅದೇ ಪುಸ್ತಕ)

ಇಂದಿನ ರಾಜಕೀಯ ನಾಯಕರು ಆಡುವ ತಲೆ ಕತ್ತರಿಸುತ್ತೇವೆ, ಹುಡುಕಿ ಕೊಲ್ಲುತ್ತೇವೆ ಎಂಬ ದ್ವೇಷದ ಮಾತುಗಳಾಗಲೀ, ವರ್ಣಭೇದ ನೀತಿಯನ್ನು ನೆನಪಿಸುವ ‘ಕರಿಯ’ ಎಂಬ ಅವಹೇಳನಕಾರಿ ಮಾತುಗಳಾಗಲೀ ಚುನಾಯಿತ ಜನಪ್ರತಿನಿಧಿಗಳಿಂದ ಯಾವುದೇ ಸಂಕೋಚ ಮುಜುಗರ ಪಶ್ಚಾತ್ತಾಪ ಇಲ್ಲದೆ ಬರುತ್ತಿರುವುದನ್ನು ನೋಡಿದಾಗ ನಮಗೆ ಪೂರ್ವಸೂರಿಗಳ ಸಭ್ಯತೆ ಸೌಜನ್ಯ ಮತ್ತು ಸಂಭಾವಿತ ನಡೆ ಸಹಜವಾಗಿ ನೆನಪಾಗುತ್ತದೆ.

ಆದರೆ ಭವಿಷ್ಯದ ಭಾರತವನ್ನು ಒಂದು ಉತ್ತಮ ನಾಗರಿಕತೆಯತ್ತ ಕರೆದೊಯ್ಯಬೇಕಿದೆ ಎನ್ನುವ ವಾಸ್ತವವನ್ನು ನಾವಿಂದು ಅರ್ಥಮಾಡಿಕೊಳ್ಳಬೇಕಲ್ಲವೇ? ಆಡುವ ಮಾತುಗಳಲ್ಲೇ ಇಲ್ಲದ ಸೌಜನ್ಯ, ಸಂಯಮ, ಸಧೃತ ವ್ಯಕ್ತಿಯ ನಡೆಯಲ್ಲಿ ಹೇಗೆ ಕಾಣಲು ಸಾಧ್ಯ? ಈ ಸದ್ಗುಣಗಳನ್ನು ರೂಢಿಸಿಕೊಳ್ಳಲು ನಮಗೆ ಪಶ್ಚಿಮದ ವಿದ್ವಾಂಸರೇನೂ ಅಗತ್ಯವಿಲ್ಲ ಅಲ್ಲವೇ? ನಮ್ಮ ನಡುವೆಯೇ ಇಂತಹ ಮುತ್ಸದ್ದಿಗಳು ಆಗಿ ಹೋಗಿದ್ದಾರೆ. ಸಾರ್ವಜನಿಕವಾಗಿ ನಾವು ಬಳಸುವ ಭಾಷೆ ಮತ್ತು ಪರಿಭಾಷೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಂತಿರಬೇಕು ಅಥವಾ ಹದಗೆಟ್ಟ ಸಮಾಜದ ಒಂದು ವರ್ಗವನ್ನು ಸರಿದಾರಿಗೆ ತರುವಂತಿರಬೇಕು.

ಈ ಕನಿಷ್ಠ ಪರಿವೆಯೂ ಇಲ್ಲದೆ ವರ್ತಿಸುವ ಜನಪ್ರತಿನಿಧಿಗಳನ್ನು, ಮಾಧ್ಯಮ ಪ್ರತಿನಿಧಿಗಳನ್ನು ಸರಿದಾರಿಗೆ ತರುವುದಾದರೂ ಹೇಗೆ? ಈ ಕಾರಣಕ್ಕಾಗಿಯಾದರೂ ರಾಜಕಾರಣಿಗಳಿಗೆ, ಸುದ್ದಿಮನೆಯ ನಿರೂಪಕರಿಗೆ, ಪ್ರಾಮಾಣಿಕ-ಸಭ್ಯ-ಸಂಯಮಯುತ-ಸೌಜನ್ಯಪೂರ್ಣ ಭಾಷೆ-ಪರಿಭಾಷೆಯನ್ನು ಕಲಿಸಲು ಒಂದು ಪ್ರಾಥಮಿಕ ಶಾಲೆಯನ್ನು ಸರ್ಕಾರಗಳೇ ಸ್ಥಾಪಿಸಬೇಕಿದೆ. ಭವಿಷ್ಯ ಭಾರತದ ಆರೋಗ್ಯದ ದೃಷ್ಟಿಯಿಂದ ಇದು ವರ್ತಮಾನದ ತುರ್ತು.

ಇಂದಿನ ರಾಜಕೀಯ ನಾಯಕರ ಸುಳ್ಳು ತಟವಟಗಳು, ಚರಿತ್ರೆಯ ತಪ್ಪು ವ್ಯಾಖ್ಯಾನಗಳು, ಸಂಸ್ಕೃತಿಯ ಅಪವಾಖ್ಯಾನಗಳು, ಪರಸ್ಪರ ದೋಷಾರೋಪಣೆಗಳು ಹಾಗೂ ವೈಯಕ್ತಿಕ ನೆಲೆಯಲ್ಲಿ ತನ್ನೆದುರಿನ ವ್ಯಕ್ತಿಯ ಭೌತಿಕ ಅಸ್ತಿತ್ವವನ್ನೇ ಹೀಯಾಳಿಸುವಂತಹ ಮಾತುಗಳು ಸಾರ್ವಜನಿಕ ಸಂಕಥನದ ಅವಿಚ್ಚಿನ್ನ ಭಾಗವಾಗಿದ್ದಾದರೂ ಹೇಗೆ? ವಾಟ್ಸಾಪ್ ವಿಶ್ವವಿದ್ಯಾಲಯದ ಹೊರಗಿನ ಯಾವುದೇ ಚರಿತ್ರೆಯ ವಿದ್ಯಾರ್ಥಿಗೆ ಈ ಪ್ರಶ್ನೆ ಕಾಡಲೇಬೇಕು. ತಮ್ಮ ವೈಯಕ್ತಿಕ ವರ್ಚಸ್ಸನ್ನೂ ಲೆಕ್ಕಿಸದೆ, ಎದುರಿಗಿರುವ ವಿರೋಧಿಯ ವ್ಯಕ್ತಿಗತ ಘನತೆಯನ್ನೂ ಲೆಕ್ಕಿಸದೆ ರಾಜಕೀಯ ನಾಯಕರು ಆಡುವ ಮಾತುಗಳು ಸಮಾಜದ ಮೇಲೆ, ವಿಶೇಷವಾಗಿ ಯುವ ಸಂಕುಲದ ಮೇಲೆ ಎಂತಹ ಋಣಾತ್ಮಕ ಪರಿಣಾಮ ಬೀರಬಹುದು ಎಂಬ ಕನಿಷ್ಠ ಪರಿವೆಯಾದರೂ ಇರಬೇಕಲ್ಲವೇ?

Tags: