Mysore
24
overcast clouds

Social Media

ಗುರುವಾರ, 04 ಜೂನ್ 2026
Light
Dark

ಮೈಸೂರು ಜಿಲ್ಲೆಯಲ್ಲಿ ಶೇ.96 ರಷ್ಟು ಮತದಾರರ ಮ್ಯಾಪಿಂಗ್‌ ಪೂರ್ಣ: ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ

ashada shukravara Complete preparations at Chamundi Hill Lakshmikanta Reddy

ಮೈಸೂರು: ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಹೇಳಿದರು.

ಈ ಕುರಿತು ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಎಸ್‌ಐಆರ್‌ ಅರ್ಹತಾ ದಿನಾಂಕವನ್ನು ಅಕ್ಟೋಬರ್.‌1ಕ್ಕೆ ನಿಗದಿಪಡಿಸಲಾಗಿದೆ. ಅಕ್ಟೋಬರ್.‌7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ವಿವರಣೆ ನೀಡಿದರು.

ಜೂನ್.‌30ರಿಂದ ಜುಲೈ.29ರವರೆಗೆ ಬಿಎಲ್‌ಓಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ನೋಂದಣಿ ಫಾರಂ ನೀಡಲಿದ್ದಾರೆ. ನೋಂದಣಿ ಫಾರಂನ್ನು ಭರ್ತಿ ಮಾಡಿದ ನಂತರ ಜುಲೈ.29ರೊಳಗೆ ಪಡೆದು, ಆಗಸ್ಟ್‌.5ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಹೇಳಿದರು.

 

Tags:
error: Content is protected !!