ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿರು ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಉದ್ಘಾಟಕಿ ಬಾನು ಮುಷ್ತಾಕ್ ಅವರು ಚಾಮುಂಡಿಬೆಟ್ಟಕ್ಕೆ ಆಗಮಿಸಿದ್ದಾರೆ.
ಬೆಟ್ಟಕ್ಕೆ ಆಗಮಿಸಿದ ಗಣ್ಯರಿಗೆ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದಿಂದ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಬಳಿಕ ಸಿಎಂ ಸಿದ್ದರಾಮಯ್ಯ ಜೊತೆಯಲ್ಲೇ ದೇವಾಲಯಕ್ಕೆ ಆಗಮಿಸಿದ ಬಾನು ಮುಷ್ತಾಕ್ ಅವರು, ನಾಡ ದೇವಿ ಚಾಮುಂಡೇಶ್ವರಿ ದರ್ಶನ ಪಡೆದರು.
ಬಾನು ಮುಷ್ತಾಕ್ ಅವರು, ಸೀರೆಯುಟ್ಟು ಹೂವು ಮುಡಿದು ಟ್ರೆಡಿಷನಲ್ ಲುಕ್‌ನಲ್ಲಿ ದಸರಾ ಉದ್ಘಾಟನೆಗೆ ಬಂದಿದ್ದು, ಎಲ್ಲರ ಚಿತ್ತ ಈಗ ಬಾನು ಮುಷ್ತಾಕ್ ಭಾಷಣದತ್ತ ನೆಟ್ಟಿದೆ.





