Mysore
25
overcast clouds

Social Media

ಮಂಗಳವಾರ, 05 ಮೇ 2026
Light
Dark

ಬಿಡುಗಡೆಗೂ ಮುನ್ನವೆ ದಾಖಲೆ ಬರೆದ ಧುರಂಧರ್‌ -2 ; ಮುಂಗಡ ಬುಕ್ಕಿಂಗ್‌ನಲ್ಲಿ ದಾಖಲೆ ಗಳಿಕೆ

ಮುಂಬೈ : ರಣವೀರ್ ಸಿಂಗ್ ಅಭಿನಯದ ಬಹು ನಿರೀಕ್ಷಿತ ‘ಧುರಂಧರ್‌ : ದಿ ರೆವೆಂಜ್‌ನ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಸಿನಿಮಾ ಮಾರ್ಚ್‌ 19 ರಂದು ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಬಿಡುಗಡೆಗೂ ಮುನ್ನವೇ ದಾಖಲೆ ಪ್ರಮಾಣದ ಟಿಕೆಟ್‌ಗಳು ಮಾರಾಟವಾಗಿದೆ.

ಚಿತ್ರದ ಪ್ರೀಮಿಯರ್ ಹಾಗೂ ಮೊದಲ ದಿನದ ಪ್ರದರ್ಶನಗಳಿಗಾಗಿ ಈಗಾಗಲೇ ಲಕ್ಷಾಂತರ ಟಿಕೆಟ್‌ಗಳು ಮಾರಾಟವಾಗಿವೆ. ಮುಂಗಡ ಬುಕ್ಕಿಂಗ್ ಮೂಲಕವೇ ಚಿತ್ರವು ಕೋಟ್ಯಂತರ ರೂಪಾಯಿ ಸಂಗ್ರಹಿಸಿರುವುದಾಗಿ ತಿಳಿದುಬಂದಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾದ ಬಳಿಕ ಬುಕ್ಕಿಂಗ್ ವೇಗವಾಗಿ ಹೆಚ್ಚಾಗಿದೆ.

ವೀಕ್ಷಣೆಗೆ ಮುಂಗಡವಾಗಿ 2.75 ಲಕ್ಷ ಟಿಕೆಟ್‌ಗಳು ಮಾರಾಟವಾಗಿದೆ. ಈ ಮೂಲಕ ಮುಂಗಡ ಕಾಯ್ದಿರಿಸುವಿಕೆಯಲ್ಲಿ ಒಟ್ಟು ದೇಶಿಯ ಗಳಿಗೆ 13.75 ಕೋಟಿ ಸಂಗ್ರಹವಾಗಿದೆ. ಇದರ ಜೊತೆಗೆ ಸಿನಿಮಾದ ಕೆಲವು ಟಿಕೆಟ್‌ಗಳು ಬ್ಲಾಕ್‌ನಲ್ಲಿ ಮಾರಾಟವಾಗಿದೆ. ಸಿನಿಮಾದ ಮುಂಗಡ ಟಿಕೆಟ್‌ ಕಾಯ್ದಿರಿಸುವಿಕೆಯ ಒಟ್ಟುಗಳಿಗೆ 19.46 ಕೋಟಿಗೆ ತಲುಪಿದೆ.

ಈ ಹಿಂದೆ ಪವನ್‌ ಕಲ್ಯಾಣ್‌ ನಟನೆಯ ಬೇಹುಗಾರಿಕೆ ಸಿನಿಮಾ `OG’ ಮುಂಗಡ ಟೆಕೆಟ್‌ ಖರೀದಿಯಲ್ಲಿ 25 ಕೋಟಿ ಗಳಿಸಿತ್ತು. ಇದೀಗ ಧುರಂಧರ್‌ : ದಿ ರಿವೆಂಜ್‌ ಸಿನಿಮಾ ಈ ದಾಖಲೆಯನ್ನು ಮುರಿಯುವ ಸಾಧ್ಯತೆಯೂ ಇದೆ.

ಹಿಂದಿ ಸೇರಿದಂತೆ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸಿದ್ದಾರೆ.

 

Tags:
error: Content is protected !!