Mysore
16
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

Mysuru Dasara | ನಾಳೆ ಏರ್‌ ಶೋ ಪೂರ್ವಭ್ಯಾಸ ; ಮತ್ತಷ್ಟು ಹೆಚ್ಚಲಿದೆ ದಸರಾ ಸಡಗರ

air show

ಮೈಸೂರು : ಮೈಸೂರಿನಲ್ಲಿ ದಸರಾ ಮಹೋತ್ಸವದ ಸಂಭ್ರಮ ಮನೆ ಮಾಡಿದ್ದು, ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ ಹಾಗೂ ವಾಯುಪಡೆ ಯೋಧರ ಸಾಹಸ ಪ್ರದರ್ಶನ ದಸರಾ ಸಡಗರವನ್ನು ಮತ್ತಷ್ಟು ಹೆಚ್ಚಿಸಲಿದೆ.

ಹತ್ತು ಹಲವು ಕಾರ್ಯಕ್ರಮಗಳು, ವಿದ್ಯುತ್ ದೀಪಾಲಂಕಾರದಿಂದ ಈಗಾಗಲೇ ದಸರಾ ಸಂಭ್ರಮ ಕಳೆಗಟ್ಟಿದೆ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಭಾರತೀಯ ವಾಯುಪಡೆ ಸಹಯೋಗದಲ್ಲಿ ಏರ್ ಶೋ ಆಯೋಜಿಸಲಾಗಿದ್ದು, ಬನ್ನಿಮಂಟಪದ ಮೈದಾನದಲ್ಲಿ ಗುರುವಾರ ಏರ್ ಶೋ ಪೂರ್ವಾಭ್ಯಾಸ ನಡೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ವೈಮಾನಿಕ ಪ್ರದರ್ಶನ ಆಯೋಜಿಸುವಂತೆ ಮನವಿ ಮಾಡಿದ್ದರು. ಇದಲ್ಲದೆ, ಜಿಲ್ಲಾಡಳಿತವೂ ಸಹ ಪತ್ರ ವ್ಯವಹಾರ ಮಾಡಿತ್ತು. ಹಲವು ಬಾರಿ ಮನವಿ ಮಾಡಿದ್ದರಿಂದ ವಾಯುಪಡೆ ಒಪ್ಪಿಗೆ ಸೂಚಿಸಿದ್ದು, ಸೆ.೨೭ ಮತ್ತು ಅ.೧ರಂದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಏರ್ ಶೋ ಆಯೋಜಿಸಲಾಗಿದೆ.

ಇದನ್ನೂ ಓದಿ:-Mysuru Dasara | ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಅರಮನೆ ನಗರಿ 

ಭಾರತೀಯ ವಾಯುಪಡೆಯ ಯೋಧರು ಸುಮಾರು ೪೦ ನಿಮಿಷಗಳ ಕಾಲ ಏರ್ ಶೋ ನಡೆಸಲಿದ್ದಾರೆ. ಇದರಿಂದಾಗಿ ಗುರುವಾರ ಸಂಜೆ ೪ ಗಂಟೆಗೆ ಪೂರ್ವಾಭ್ಯಾಸ ನಡೆಯಲಿದೆ. ವಾಯುಪಡೆ ಸಿಬ್ಬಂದಿಯ ಒಪ್ಪಿಗೆ ಮೇರೆಗೆ ಸ್ಥಳಕ್ಕೆ ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನ ಸೇವೆ ವ್ಯವಸ್ಥೆ ಮಾಡಲಾಗಿದೆ. ಬನ್ನಿಮಂಟಪ ಮೈದಾನದಲ್ಲಿ ಸ್ಥಳ ನಿಗಧಿಯಾಗಿದ್ದು, ಸ್ಥಳದಲ್ಲಿ ಧೂಳು ಬಾರದ ರೀತಿ ಹೆಚ್ಚು ನೀರನ್ನು ಸಿಂಪಡಿಸಲಾಗಿದೆ. ಅಲ್ಲಿಗೆ ಯಾವುದೇ ತಿಂಡಿ ತಿನಿಸು ತರಬಾರದು ಹಾಗೂ ಕಮಾಂಡರ್‌ಗಳು ಬಂದಾಗ ಅಲ್ಲಿ ಮಕ್ಕಳು ಫೋಟೋ ತೆಗೆದುಕೊಳ್ಳಲು ಮುಂದೆ ಹೋಗುತ್ತಾರೆ. ಅಂತಹ ಘಟನೆಗಳು ನಡೆಯದ ರೀತಿ ಪೊಲೀಸ್ ಸಿಬ್ಬಂದಿಗಳು ನೋಡಿಕೊಳ್ಳಬೇಕು. ಕಾರ್ಯಕ್ರಮ ನಿಗದಿತ ಸಮಯಕ್ಕೆ ಸರಿಯಾಗಿ ಆರಂಭವಾಗುವುದರಿಂದ ಪಾಸ್ ಹೊಂದಿರುವ ಸಾರ್ವಜನಿಕರು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಆಸೀನರಾಗಿರಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.

Tags:
error: Content is protected !!