Mysore
25
scattered clouds

Social Media

ಮಂಗಳವಾರ, 03 ಫೆಬ್ರವರಿ 2026
Light
Dark

ಮೈಸೂರು ದಸರಾ: ಕುಪ್ಪಣ್ಣ ಪಾರ್ಕ್‌ನಲ್ಲಿ ಸ್ವಚ್ಛತಾ ಪರಿಶೀಲನೆ ನಡೆಸಿದ ಸುಭಾನ್

ಮೈಸೂರು: ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಕುಪ್ಪಣ್ಣ ಪಾರ್ಕ್‌ನಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ಮೈಸೂರು ದಸರಾ ಸ್ವಚ್ಛತೆ ಮತ್ತು ವ್ಯವಸ್ಥೆ ಉಪಸಮಿತಿಯ ಅಧ್ಯಕ್ಷ ಸುಭಾನ್ ಅವರ ಅಧ್ಯಕ್ಷತೆಯಲ್ಲಿ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಲಾಯಿತು.

ಫಲಪುಷ್ಪ ಪ್ರದರ್ಶನದಲ್ಲಿ ಇಡಲಾಗಿರುವ ಎಲ್ಲಾ ಮಳಿಗೆಗಳಿಗೆ ಭೇಟಿ ನೀಡಿದ ಸುಭಾನ್‌ ತಂಡ, ಸಾರ್ವಜನಿಕರು ಹಸಿ ಮತ್ತು ಒಣ ಕಸವನ್ನು ಹಾಕಲು ಪ್ರತ್ಯೇಕ ಕಸದ ಬುಟ್ಟಿಗಳನ್ನು ಇಡಬೇಕು. ಕಸವನ್ನು ಮೈಸೂರು ಮಹಾನಗರ ಪಾಲಿಕೆಯ ವಾಹನಗಳಿಗೆ ನೀಡುವಂತೆ ಮಳಿಗೆದಾರರಿಗೆ ಸೂಚನೆ ನೀಡಿದರು.

ಕಸವನ್ನು ಬುಟ್ಟಿಯಲ್ಲಿ ಹಾಕಬೇಕು ಎಂಬ ಸಂದೇಶವಿರುವ ಫಲಕವನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದ ಅವರು, ಯಾವುದೇ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡದಂತೆ ಸೂಚನೆ ನೀಡಿದರು.

ಇದನ್ನೂ ಓದಿ:-ಮೈಸೂರು ದಸರಾ: ಪ್ರೇಕ್ಷಕರ ಕಣ್ಮನ ಸೆಳೆದ ಮುದ್ದು ಪ್ರಾಣಿಗಳ ಪ್ರದರ್ಶನ

ಸ್ಥಳದಲ್ಲಿ ಹಾಜರಿದ್ದ ಆರೋಗ್ಯ ನಿರೀಕ್ಷಕರಾದ ಗೀತಾ ಅವರಿಗೆ ಮಳಿಗೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ವಶಪಡಿಸಿಕೊಂಡು ನಿಯಮಾನುಸಾರ ದಂಡ ವಿಧಿಸಿ ಎಂದು ಸೂಚನೆ ನೀಡಿದರು.

ಫಲ ಪುಷ್ಪ ಪ್ರದರ್ಶನದ ಪ್ರವೇಶ ದ್ವಾರದ ಹತ್ತಿರ ಸಾರ್ವಜನಿಕರ ಟಿಕೆಟ್ ಪರಿಶೀಲಿಸುವವರಿಗೆ ಟಿಕೆಟ್ ಹರಿದ ನಂತರ ಕಸದ ಬುಟ್ಟಿಯೊಳಗೆ ಹಾಕುವಂತೆ ಸಲಹೆ ನೀಡಿದರು. ಸ್ವಚ್ಛತೆಯಿಂದ ನಡೆಸುತ್ತಿರುವ ಮಳಿಗೆಯ ಮಾಲೀಕರಿಗೆ ಪ್ರಶಂಸೆ ವ್ಯಕ್ತಪಡಿಸಿದರು.

Tags:
error: Content is protected !!