ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ದಸರಾ ಪುಸ್ತಕ ಮೇಳದಲ್ಲಿಂದು 4 ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ವತಿಯಿಂದ ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಲಾಗಿರುವ ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳದಲ್ಲಿ ಇಂದು 4 ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಇದನ್ನು ಓದಿ: ಮೈಸೂರು ದಸರಾ ಮಹೋತ್ಸವ: ರೈತ ದಸರಾದ ಪ್ರಮುಖ ಆಕರ್ಷಣೆಗಳಿವು.!
ಪ್ರೊ. ಜಿ. ಅಬ್ದುಲ್ ಬಶೀರ್ ಅವರ ಚಿಂತನ ಮತ್ತು ಮನದಂಗಳದ ಮಾತುಕತೆ, ಡಾ. ನರಸಿಂಹಮೂರ್ತಿ ಹೂವಿನಹಳ್ಳಿ ಅವರ ತುಂಬಿ ಬಂದಿತ್ತಾ- ಬೇಂದ್ರೆ ಕಾವ್ಯದ ಅಧ್ಯಯನ ಹಾಗೂ ಡಾಕ್ಟರ್ ರೇಣುಕಾ ತಾಯಿ ಅವರ ದಿಲ್ಕಶ್ ಗಜಲ್ ಕೃತಿಗಳನ್ನು ಡಾ. ಬೋರೇಗೌಡ ಚಿಕ್ಕಮರಳಿ ಅವರು ಬಿಡುಗಡೆ ಮಾಡಿದರು.
ಕೃತಿಯ ಲೇಖಕರಾದ ಡಾ. ನರಸಿಂಹಮೂರ್ತಿ ಹೂವಿನಹಳ್ಳಿ ಹಾಗೂ ಡಾ. ರೇಣುಕಾ ತಾಯಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಸಮಿತಿ ಸದಸ್ಯರಾದ ಕವಯತ್ರಿ ಸುಚಿತ್ರ ಹೆಗಡೆ, ರಾಜಶೇಖರ ಕದಂಬ ಹಾಜರಿದ್ದರು.





