ಮೈಸೂರು : ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆ ಬನ್ನಿ ಮಂಟಪ ತಲುಪಿದೆ. ಈ ಮೂಲಕ ಮೈಸೂರು ದಸರಾ ಜಂಬೂಸವಾರಿ ಯಶಸ್ವಿಯಾಗಿ ನಡೆದಿದೆ. ಅರಮನೆಯಿಂದ ಬನ್ನಿಮಂಟಪದ ವರೆಗೆ ಒಟ್ಟು 2 ಗಂಟೆ ಕಾಲ ಜಂಬೂಸವಾರಿ ನಡೆದಿದ್ದು, ಜಂಬೂಸವಾರಿ ಬನ್ನಿಮಂಟಕ್ಕೆ ತಲುಪಿದ ಬಳಿಕ ಪೊಲೀರು ರಾಷ್ಟ್ರಗೀತೆ ನುಡಿಸಿ ಗೌರವ ವಂದನೆ ಸಲ್ಲಿಸಿದರು.
ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ್ದರು. ಜಂಬೂ ಸವಾರಿ ಅರಮನೆಯಿಂದ ಹೊರಟು ಕೆ.ಆರ್ ಸರ್ಕಲ್, ಸಯ್ಯಾಜಿ ರಾವ್, ರಸ್ತೆ, ಆಯುರ್ವೇದಿಕ್ ವೃತ್ತ, ಆರ್.ಎಂ.ಸಿ, ತಿಲಕ್ ನಗರ, ಹೈವೇ ಸರ್ಕಲ್ ರಸ್ತೆ ಮೂಲಕ ಜಂಬೂ ಸವಾರಿ ಬನ್ನಿ ಮಂಟಪ ತಲುಪಿದೆ. ಈ ಮೂಲಕ 2025ನೇ ಸಾಲಿನ ಮೈಸೂರು ದಸರಾ ಜಂಬೂಸವಾರಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಇದನ್ನು ಓದಿ : Mysuru Dasara | ರೋಮಾಂಚಕ ಜಂಬೂ ಸವಾರಿ, ಸಂಭ್ರಮಿಸಿದ ಲಕ್ಷಾಂತರ ಜನ..
ಜಂಬೂಸವಾರಿ ಈ ಭಾರಿ ಬಹಳ ವಿಜೃಂಭಣೆಯಿಂದ ನಡೆಯಿತು. ಜಂಬೂಸವಾರಿ ಸಾಗುತ್ತಿದ್ದ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ಜನ ಸೇರಿದ್ದರು, ಹಾಗೇ ಜಂಬೂಸವಾರಿ ಮುಂದೆ ಕಲಾ ತಂಡಗಳು ಸಹ ಮೆರಗು ನೀಡಿದವು. ಇದೆಲ್ಲವನ್ನು ಸಹಸ್ರಾರು ಜನರು ಕಣ್ತುಂಬಿಕೊಂಡು, ಚಾಮುಂಡೇಶ್ವರಿಗೆ ಕೈ ಮುಗಿದು ಪ್ರಾರ್ಥಿಸಿಕೊಂಡರು.
ಈ ಭಾರೀ ಲೇಖಕಿ ಭಾನು ಮುಷ್ತಾಕ್ ಮೈಸೂರು ದಸರಾಕ್ಕೆ ಚಾಲನೆ ನೀಡಿದ್ದರು. ಈ ಬಾರಿಯೂ ಅಂಬಾರಿಯನ್ನು ಅಭಿಮನ್ಯು ಹೊತ್ತಿದ್ದಾನೆ . ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿ ವಿರಾಜಮಾನಳಾಗಿದ್ದಾಳೆ.
ಜಂಬೂಸವಾರಿ ಮೆರವಣಿಗೆ ವೇಳೆ 58 ಸ್ತಬ್ಧಚಿತ್ರ ಪ್ರದರ್ಶನವಾಗಿದೆ. 31 ಜಿಲ್ಲೆಗಳ ಕಲೆ, ಸಾಹಿತ್ಯ, ಇತಿಹಾಸವನ್ನು ಸ್ತಬ್ಧಚಿತ್ರ ಪ್ರತಿಬಿಂಬಿಸಿವೆ.





