ಮೈಸೂರು : ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ರಾಜವಂಶಸ್ಥರು ನಡೆಸುವ ನವರಾತ್ರಿ ಉತ್ಸವ ಮತ್ತು ವಿಜಯದಶಮಿ ಮೆರವಣಿಗೆಗೆ ಪಟ್ಟದ ಆನೆಗಳಾಗಿ ಶ್ರೀಕಂಠ, ಏಕಲವ್ಯ ಆನೆಗಳು ಆಯ್ಕೆಯಾಗಿವೆ.
ಇದನ್ನೂ ಓದಿ: ಸೌಹಾರ್ದತೆಯ ಜೀವತಾಣ ರತ್ನಪುರಿ
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನೆನಪಿಗೆ ನಾಮಕರಣ ಮಾಡಿರುವ ‘ಶ್ರೀಕಂಠ’ ಆನೆ ಮೊದಲ ವರ್ಷವೇ ಪಟ್ಟದ ಆನೆಯಾಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಕರೆತರಲಾಗಿರುವ 14 ಆನೆಗಳು ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದು, ದಸರಾ ಗಜಪಡೆಗೆ ಮೊದಲ ಹಂತದ ಲೈನ್ ತಾಲೀಮನ್ನು ಪೂರ್ಣಗೊಳಿಸಲಾಗಿದೆ. ಅಭಿಮನ್ಯು, ಮಹೇಂದ್ರ, ಧನಂಜಯ, ಏಕಲವ್ಯ, ಭೀಮ ಆನೆಗಳಿಗೆ ಭಾರ ಹೊರುವ ತಾಲೀಮನ್ನು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಮರಳಿನ ಮೂಟೆ ಹೊರುವ ತಾಲೀಮು, ಮರದ ಅಂಬಾರಿ ಹೊರುವ ತಾಲೀಮು ನಡೆಸಲಾಗುತ್ತದೆ.





