ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಶುರುವಾಗಿದ್ದು, ನಕಲಿ ಪಾಸ್ ಬಳಸಿ ಅರಮನೆ ಪ್ರವೇಶಿಸಿದ ಅನಾಮಿಕನನ್ನು ಪೊಲೀಸರು ಬಂಧಿಸಿದ್ದಾರೆ.
ಅರಮನೆಯಲ್ಲಿ ಪಾಸ್ ತಪಾಸಣೆ ವೇಳೆ ಘಟನೆ ಬೆಳಕಿಗೆ ಬಂದಿದೆ. ನಕಲಿ ಪಾಸ್ ಬಳಸಿ ಅನಾಮಿಕನೋರ್ವ ಅರಮನೆ ಪ್ರವೇಶ ಮಾಡಿದ್ದ. ಪರಿಶೀಲನೆ ನಡೆಸಿದ ಪೊಲೀಸರ ಕೈಗೆ ಅನಾಮಿಕ ಸಿಕ್ಕಿಬಿದ್ದಿದ್ದು, ಆ ವ್ಯಕ್ತಿಯನ್ನು ಬಂಧಿಸಲಾಗಿದೆ.





