Mysore
18
scattered clouds

Social Media

ಸೋಮವಾರ, 26 ಜನವರಿ 2026
Light
Dark

ಮೈಸೂರು ದಸರಾ 2025: ಈ ಬಾರಿ ಮೆರವಣಿಗೆಯಲ್ಲಿ 58 ಟ್ಯಾಬ್ಲೋಗಳ ಪ್ರದರ್ಶನ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2025ರ ದಸರಾ ಜಂಬೂಸವಾರಿ ಮೆರವಣಿಗೆ ಪ್ರಮುಖ ಆಕರ್ಷಣೆಯಾದ ಸ್ಥಬ್ಧಚಿತ್ರಗಳನ್ನು ತಯಾರಿ ಮಾಡಲಾಗಿದ್ದು, ಈ ಬಾರಿ ಮೆರವಣಿಗೆಯಲ್ಲಿ 58 ಟ್ಯಾಬ್ಲೋಗಳು ಮೆರವಣಿಗೆಯಲ್ಲಿ ಸಾಗಲಿವೆ.

31 ಜಿಲ್ಲೆಗಳ ಕಲೆ, ಸಾಹಿತ್ಯ, ಸಂಸ್ಕೃತಿ ವೈಶಿಷ್ಟ್ಯ , ಆಚಾರ ವಿಚಾರ, ಭೌಗೋಳಿಕ ಹಿನ್ನೆಲೆ ಸಾರುವ ಸ್ಥಬ್ಧ ಚಿತ್ರಗಳು ರೆಡಿಯಾಗಿವೆ.

ಇದನ್ನು ಓದಿ : ಮೈಸೂರು ದಸರಾ 2025: ಜಂಬೂಸವಾರಿಗೆ ಸಜ್ಜಾಗುತ್ತಿರುವ ಗಜಪಡೆ

27 ರಾಜ್ಯ, ಕೇಂದ್ರ ಇಲಾಖಾವಾರು, ನಿಗಮ ಮಂಡಳಿ ಮತ್ತು ಸರ್ಕಾರದ ಯೋಜನೆಗಳು, ಸಾಧನೆಗಳ ಕುರಿತ ಸ್ತಬ್ಧ ಚಿತ್ರ ಇವಾಗಿವೆ.

ಹೆಚ್‌ಎಎಲ್‌, ಕೆ.ಎಸ್.ಆರ್.ಟಿಸಿ, ಆರೋಗ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳ ನಿರ್ಮಾಣ ಮಾಡಲಾಗಿದ್ದು, ಕಾವೇರಿ ನೀರಾವರಿ ನಿಗಮದಿಂದ ಮುಂದಿನ ಜಲ ಸಂಪತ್ತಿನ ಮಹತ್ವ, ಉಪಯೋಗದ ಬಗ್ಗೆ ಸಂದೇಶ. ಸಮಾಜ ಕಲ್ಯಾಣ ಇಲಾಖೆಯಿಂದ ಯೋಜನೆಗಳ ಬಗ್ಗೆ ವಿವರಣೆ ನೀಡಲಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಅಲ್ಲಿನ ಕಲೆ ಸಂಸ್ಕೃತಿ ಬಿಂಬಿಸುವ ಟ್ಯಾಬ್ಲೋ ತಯಾರಿಸಲಾಗಿದೆ.

Tags:
error: Content is protected !!