Mysore
19
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ದಸರಾ ಡ್ರೋನ್ ಶೋ: ಅನಧಿಕೃತವಾಗಿ ಡ್ರೋನ್ ವಿಡಿಯೋ ಚಿತ್ರೀಕರಣ ಮಾಡುವವರ ವಿರುದ್ಧ ಕ್ರಮ

_dasarea air show

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಅತಿದೊಡ್ಡ ಡ್ರೋನ್ ಪ್ರದರ್ಶನ ನಡೆಸಲಾಗುತ್ತಿದ್ದು, ಸೆ.28, 29 ಹಾಗೂ ಅ.1 ಮತ್ತು 2ರಂದು ಅಭೂತಪೂರ್ವ ಪ್ರದರ್ಶನ ನಡೆಯಲಿದೆ.

ಆದರೆ ಡ್ರೋನ್ ಪ್ರದರ್ಶನ ನಡೆಯುವ ವೇಳೆ ಕೆಲವು ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳು ತಮ್ಮ ಡ್ರೋನ್‌ಗಳನ್ನು ಹಾರಿಸಿ ಸೆಸ್ಕ್‌ ವತಿಯಿಂದ ನಡೆಸಲಾಗುವ ಡ್ರೋನ್ ಪ್ರದರ್ಶನದ ದೃಶ್ಯಾವಳಿಗಳನ್ನು ಸೆರೆಹಿಡಿಯುವುದು ಹಾಗೂ ಡ್ರೋನ್‌ಗಳ ಮೂಲಕ ಚಿತ್ರೀಕರಿಸಿದ ದೃಶ್ಯದ ತುಣುಕುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವುದಕ್ಕೆ ನಿರ್ಬಂಧ ಹೇರಲಾಗಿದೆ.

ಇದನ್ನು ಓದಿ : ಮೈಸೂರು ದಸರಾ: ಪುಸ್ತಕ ಮೇಳದಲ್ಲಿ 4 ಪುಸ್ತಕಗಳ ಬಿಡುಗಡೆ

ಈ ಹಿನ್ನೆಲೆಯಲ್ಲಿ ಅನುಮತಿ ಪಡೆಯದೆ ಡ್ರೋನ್‌ಗಳನ್ನು ಹಾರಿಸಿ, ಸೆಸ್ಕ್ ವತಿಯಿಂದ ದಿನಾಂಕ: ಸೆ.28, 29 ಹಾಗೂ ಅ.1 ಮತ್ತು 2ರಂದು ನಡೆಸಲಾಗುವ ಡ್ರೋನ್ ಪ್ರದರ್ಶನದ ದೃಶ್ಯಗಳನ್ನು ಡ್ರೋನ್‌ಗಳ ಮೂಲಕ ಚಿತ್ರೀಕರಿಸಿ, ಡ್ರೋನ್‌ ಶೋ ದೃಶ್ಯದ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡುವುದು ಕಂಡುಬಂದಲ್ಲಿ ಅವರುಗಳ ವಿರುದ್ಧ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮಕೈಗೊಳ್ಳಲು ಸೆಸ್ಕ್ ‌ನಿರ್ಧರಿಸಿದೆ.

ಆದ್ದರಿಂದ ಯಾವುದೇ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಸೆಸ್ಕ್ ವತಿಯಿಂದ ನಡೆಸಲಾಗುತ್ತಿರುವ ಡ್ರೋನ್ ಪ್ರದರ್ಶನದ ದೃಶ್ಯಾವಳಿಗಳನ್ನು ಡ್ರೋನ್‌ಗಳ ಮೂಲಕ ಅನಧಿಕೃತವಾಗಿ ಚಿತ್ರೀಕರಣ ಮಾಡದಂತೆ ಈ ಮೂಲಕ ಎಚ್ಚರಿಸಲಾಗಿದೆ. ಸೆಸ್ಕ್‌ ವತಿಯಿಂದ ನೀಡಲಾಗಿರುವ ಎಚ್ಚರಿಕೆ ನಡುವೆಯೂ ಯಾವುದೇ ವ್ಯಕ್ತಿಗಳು ಅಥವಾ ಸಂಸ್ಥೆಗಳು ಖಾಸಗಿಯಾಗಿ ಡ್ರೋನ್‌ ಪ್ರದರ್ಶನದ ದೃಶ್ಯಗಳನ್ನು ಚಿತ್ರೀಕರಿಸುವುದು ಕಂಡುಬಂದಲ್ಲಿ ಅಂತಹ ವ್ಯಕ್ತಿ ಮತ್ತು ಸಂಸ್ಥೆಗಳ ಡ್ರೋನ್‌ಗಳನ್ನು ವಶಕ್ಕೆ ಪಡೆದುಕೊಳ್ಳುವ ಮೂಲಕವೂ ಕ್ರಮವಹಿಸಲಾವುದು ಎಂದು ಸೆಸ್ಕ್‌ ಪ್ರಕಟಣೆಯಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

Tags:
error: Content is protected !!