Mysore
32
few clouds

Social Media

ಸೋಮವಾರ, 23 ಮಾರ್ಚ್ 2026
Light
Dark

ಮೈಸೂರಿನಲ್ಲಿ ಮೇಳೈಸಿದ ದಸರಾ ಸಡಗರ: ಡಿಎವಿ ಪಬ್ಲಿಕ್ ಶಾಲೆಯಲ್ಲಿ ಬೊಂಬೆಗಳ ಪ್ರದರ್ಶನ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರಿನ ಡಿಎವಿ ಪಬ್ಲಿಕ್ ಶಾಲೆಯಲ್ಲಿ ಬೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಮೈಸೂರಿನ ವಿಶ್ವೇಶ್ವರ ನಗರದಲ್ಲಿರುವ ಡಿಎವಿ ಪಬ್ಲಿಕ್‌ ಶಾಲೆಯಲ್ಲಿಂದು ಬೊಂಬೆಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ಬೊಂಬೆಗಳ ಪ್ರದರ್ಶನದ ಜೊತೆಗೆ ವಿದ್ಯಾರ್ಥಿಗಳು ಹಲವು ಮಾಹಿತಿಗಳನ್ನು ನೀಡುತ್ತಿದ್ದಾರೆ.

ವಿಷ್ಣುವಿನ ದಶಾವತಾರ, ನವದುರ್ಗೆಯರು, ಮಹಾಭಾರತದ ಸನ್ನಿವೇಶ, ದ್ರೌಪದಿ ವಸ್ತ್ರಾಪಹರಣ, ಅಷ್ಟ ಲಕ್ಷ್ಮಿಯರು, ಸರಸ್ವತಿ, ವರಮಹಾಲಕ್ಷ್ಮಿ, ಮಹಾಭಾರತ, ರಾಮಾಯಣ ಸೇರಿದಂತೆ ಬೊಂಬೆಗಳು ಪುರಾಣ ಕಥೆಗಳನ್ನು ಹೇಳುತ್ತಿವೆ.

ಮೈಸೂರು ರೈಲ್ವೆ ನಿಲ್ದಾಣ, ಮೈಸೂರು ವಿಶ್ವವಿದ್ಯಾನಿಲಯ, ಕೆಆರ್‌ಎಸ್ ಆಣೆಕಟ್ಟು, ಕೃಷ್ಣರಾಜ ಮಾರುಕಟ್ಟೆ, ಆಪರೇಷನ್ ಸಿಂಧೂರ್, ಆರ್‌ಸಿಬಿ ವಿಜಯೋತ್ಸವ, ನಿಮ್ಹಾನ್ಸ್ ಆಸ್ಪತ್ರೆ ಸೇರಿದಂತೆ ಹಲವು ಪ್ರೇಕ್ಷಣೀಯ ಸ್ಥಳಗಳು ವಿದ್ಯಾರ್ಥಿಗಳ ಕೈಚಳಕದಲ್ಲಿ ಆಕರ್ಷಕವಾಗಿ ಮೂಡಿ ಬಂದಿವೆ.

Tags:
error: Content is protected !!