ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟನಾ ವೇದಿಕೆಯಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು, ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದಾರೆ.
ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ಸಿಎಂ ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ 45 ವರ್ಷ ಪೂರೈಸಿದ್ದಾರೆ. ಇದು ಮೈಸೂರಿನ ಜನರಿಗೆ ಹೆಮ್ಮೆಯ ವಿಷಯ ಎಂದರು.
ಇನ್ನು ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ದೊಡ್ಡ ಸಾಧನೆ ಮಾಡಿದ್ದಾರೆ. ಒಬ್ಬ ಕನ್ನಡತಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಅವರು ದಸರಾ ಉದ್ಘಾಟನೆ ಮಾಡಿರೋದು ನಮ್ಮೆಲ್ಲರಿಗೂ ಸಂತಸ ತಂದಿದೆ ಎಂದು ಹೇಳಿದರು.
ಇನ್ನು ಈ ದೇಶದಲ್ಲಿ ಬರೀ ಜಾತಿ ಜಾತಿ, ಅಧರ್ಮ, ಅನೀತಿಗಳನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ನಾವೆಲ್ಲರೂ ಧರ್ಮದ ಪರ ನಿಲ್ಲಬೇಕು. ಚಾಮುಂಡೇಶ್ವರಿ ದೇವಿಗೆ ಬಾನು ಮುಷ್ತಾಕ್ ಪೂಜೆ ಮಾಡಿ ಮಂಗಳಾರತಿ ಪಡೆದಿದ್ದಾರೆ. ಎಲ್ಲರೂ ಧರ್ಮ, ಬೇಧ ಭಾವ ಮರೆತು ಬದುಕೋಣ ಎಂದು ಹೇಳಿದರು.





