Mysore
21
overcast clouds

Social Media

ಶುಕ್ರವಾರ, 07 ಆಗಸ್ಟ್ 2026
Light
Dark

ಗುಂಡ್ಲುಪೇಟೆ | ಕತ್ತು ಕೂಯ್ದು ವ್ಯಕ್ತಿಯ ಬರ್ಬರ ಹತ್ಯೆ

ಗುಂಡ್ಲುಪೇಟೆ : ಪಟ್ಟಣದ ಹೊರವಲಯದ ವಿಜಯಪುರ ಅಮಾನಿ ಕೆರೆಯ ಬಳಿ ವ್ಯಕ್ತಿಯೊಬ್ಬ ಬರ್ಬರವಾಗಿ ಕೊಲೆಯಾಗಿರುವ ಘಟನೆ ನಡೆದಿದೆ.

ತಾಲ್ಲೂಕಿನ ಮೂಖಹಳ್ಳಿ ಗ್ರಾಮ ನಂಜುಂಡಸ್ವಾಮಿ ಬಿನ್ ಕರಿಯ 22 ವರ್ಷ ಮೃತ ವ್ಯಕ್ತಿ. ಕತ್ತು ಕೂಯ್ದು ಕೊಲೆ ಮಾಡಿರುವ ಸ್ಥಿತಿಯಲ್ಲಿ ಮೃತದೇಹ‌ ಪತ್ತೆಯಾಗಿದ್ದು, ಡಿವೈಎಸ್ಪಿ ಸ್ನೇಹರಾಜ್, ಸರ್ಕಲ್‌ ಇನ್ಸ್ ಪೆಕ್ಟರ್ ಜಯಕುಮಾರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಆರೋಪಿಗಳ ಸೆರೆಗೆ ಜಾಲ ಬೀಸಿದ್ದಾರೆ.

ಸ್ನೇಹಿತರ ಜೊತೆ ಮದ್ಯ ಸೇವನೆ ಮಾಡುಲು ತೆರಳಿದಾಗ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ ಶವಪರೀಕ್ಷೆ ನಡೆದ ನಂತರ ಹಾಗೂ ಪೊಲೀಸರ ತನಿಕೆಯ ನಂತರ ಮಾಹಿತಿ ಹೊರ ಬೀಳಬೇಕಿದೆ.

ಸಾರ್ವಜನಿಕರಲ್ಲಿ ಆತಂಕ
ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಹೆದ್ದಾರಿ ದರೋಡೆ, ಕೊಲೆ, ಕಳ್ಳತನ ಪ್ರಕರಣಗಳಿಂದ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದ್ದು ಕಾನೂನು ಸುವ್ಯವಸ್ಥೆ ಬಿಗಿಯಾಗಬೇಕಿದೆ. ಸಾರ್ವಜನಿಕರಲ್ಲಿ ಭಯಮುಕ್ತ ವಾತಾವರಣ ಸೃಷ್ಟಿಸಬೇಕಿದೆ.

Tags:
error: Content is protected !!