ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಮೈಸೂರು ಜಿಲ್ಲಾಡಳಿತದ ವತಿಯಿಂದ ಸಿಎಂ ಮತ್ತು ಡಿಸಿಎಂಗೆ ಪಂಚಲೋಹ ವಿಗ್ರಹವನ್ನು ಉಡುಗೊರೆಯಾಗಿ ನೀಡಲಿದ್ದಾರೆ.
ವಿಶ್ವವಿಖ್ಯಾತ ಜಂಬೂಸವಾರಿಗೂ ಮುಂಚೆ ಸಿಎಂ ಮತ್ತು ಡಿಸಿಎಂ ನಂದಿಧ್ವಜ ಸ್ತಂಭಕ್ಕೆ ಪೂಜೆ ಸಲ್ಲಿಸಲಿದ್ದು, ನಂದಿ ಪೂಜೆಯ ನಂತರ ಜಿಲ್ಲಾಡಳಿತ ಇಲಾಖೆಯೂ ಪಂಚಲೋಹ ವಿಗ್ರಹವನ್ನು ಉಡುಗೊರೆ ಕೊಡಲಿದ್ದಾರೆ.
ಈ ಪಂಚಲೋಹ ವಿಗ್ರಹದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ತಾಯಿ ಚಾಮುಂಡೇಶ್ವರಿ ಮೂರ್ತಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕಾಡಸಿದ್ದೇಶ್ವರ ಮೂರ್ತಿಯನ್ನು ನೀಡಲಾಗುವುದು.
ಸಿಎಂ ಮತ್ತು ಡಿಸಿಎಂ ಅವರಿಗೆ ನೀಡಲಾಗುವ ಮೂರ್ತಿಗಳನ್ನು ಮೈಸೂರು ಶಿಲ್ಪಿ ರಾಜೇಶ್ ಅವರು ಪಂಚಲೋಹದ ವಿಗ್ರಹಗಳನ್ನು ಒಂದು ವಾರದಲ್ಲಿ ತಯಾರಿಸಿದ್ದಾರೆ ಎಂದು ಹೇಳಲಾಗಿದೆ.