ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು 6 ವರ್ಷ 8 ತಿಂಗಳ ವಯಸ್ಸಿನ ಆಫ್ರಿಕಾ ಬೇಟೆ ಚೀತಾ ‘ಬ್ರೂಕ್’ ದಿಢೀರ್ ಮೆನಿಂಜಿಟಿಸ್ ರೋಗಕ್ಕೆ ತುತ್ತಾಗಿ ಶನಿವಾರ ಮುಂಜಾನೆ ಅಸು ನೀಗಿತು ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಆನ್ನೆ ವಾನ್ ಡೈಕ್ ಚೀತಾ ಕೇಂದ್ರದಿಂದ 2020ರ ಆಗಸ್ಟ್ 17 ರಂದು ಗಂಡು ಚೀತಾ ಬ್ರೂಕ್ ಅನ್ನು ಮೈಸೂರು ಮೃಗಾಲಯಕ್ಕೆ ತರಲಾಗಿತ್ತು.
ಇದನ್ನು ಓದಿ : ಸಿಲಿಂಡರ್ ಸ್ಫೋಟ ಪ್ರಕರಣ : ತನಿಖೆ ತೀವ್ರ ; ಮೈಸೂರಲ್ಲಿ ಖಾಕಿ ಕಟ್ಟೆಚ್ಚರ
ಅನಾರೋಗ್ಯದಿಂದ ಬಳಲುತ್ತಿದ್ದ ಚೀತಾ ಬ್ರೂಕ್ ಕಳೆದ ಮೂರು ದಿನಗಳಿಂದ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಿತ್ತು. ಮೃಗಾಲಯದ ಪಶುವೈದ್ಯಾಧಿಕಾರಿಗಳು ಬ್ರೂಕ್‌ಗೆ ಅಗತ್ಯ ಚಿಕಿತ್ಸೆ ನೀಡುತ್ತಿದ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಮರಣ ಹೊಂದಿತು. ಬ್ರೂಕ್ ಸಾವಿಗೆ ಮೃಗಾಲಯವು ತೀವ್ರ ವಿಷಾದ ವ್ಯಕ್ತಪಡಿಸುತ್ತದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





