Mysore
24
broken clouds

Social Media

ಬುಧವಾರ, 09 ಜುಲೈ 2025
Light
Dark

ಅಗಲಿದ ಬಸವನಿಗೆ ಶ್ರದ್ಧಾಂಜಲಿ: ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ

**Tribute to the departed Basava: Dog moved to tears near the grave**

ಮೈಸೂರು: ಹುಚ್ಚುನಾಯಿ ಕಡಿತದಿಂದ ಮೃತಪಟ್ಟ ಮಹಾಲಿಂಗೇಶ್ವರ ದೇವಸ್ಥಾನದ ಬಸವನಿಗೆ ಮೇಟಗಳ್ಳಿ ಗ್ರಾಮಸ್ಥರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಕೆಲವು ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಬಸವನಿಗೆ ದೇವಾಲಯದ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಿಸಿದ್ದ ಗ್ರಾಮಸ್ಥರು ದುಃಖತಪ್ತರಾಗಿ ಅಂತಿಮ ವಿದಾಯ ಹೇಳಿದ್ದರು.

ಅಂತ್ಯಕ್ರಿಯೆ ವೇಳೆ ಬಸವನ ಜೊತೆಯೇ ನಂಟು ಬೆಳೆಸಿಕೊಂಡಿದ್ದ ಎರಡು ಶ್ವಾನಗಳು ಆಗಮಿಸಿ ಕಂಬನಿ ಮಿಡಿದು ಸ್ನೇಹಿತನನ್ನು ಬೀಳ್ಕೊಟ್ಟಿದ್ದವು.

ಇಂದು ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದ ವೇಳೆಯೂ ಬಂದ ಶ್ವಾನ ಸಮಾಧಿ ಬಳಿ ಇರಿಸಲಾಗಿದ್ದ ಭಾವಚಿತ್ರದ ಮುಂಭಾಗ ನಿಂತು ಕಂಬನಿ ಮಿಡಿದ ಹೃದಯಸ್ಪರ್ಶಿ ಘಟನೆ ನಡೆಯಿತು. ಇಂತಹ ಅಪೂರ್ವ ಸನ್ನಿವೇಶಕ್ಕೆ ಮೇಟಗಳ್ಳಿ ಗ್ರಾಮಸ್ಥರು ಸಾಕ್ಷಿಯಾದರು.

Tags:
error: Content is protected !!