ಮೈಸೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಟ್ರಾನ್ಸ್ ಜೆಂಡರ್ ಪರವಿದೆ ಎಂದು ಟ್ರಾನ್ಸ್ ಜೆಂಡರ್ ಶಿವರಾಮು, ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆದಮೇಲೆ ನಮಗೆ ಅನೇಕ ಸೌಲಭ್ಯಗಳು ದೊರೆಯುತ್ತಿದೆ. ಮಹಿಳೆಯರಂತೆ ನಮಗೂ ಗ್ಯಾರಂಟಿ ಯೋಜನೆಗಳು ದೊರೆಯುತ್ತಿದೆ. ಗೃಹಲಕ್ಷ್ಮಿ ಹಣವು ಬರುತ್ತಿದೆ. ಶಕ್ತಿಯೋಜನೆಯಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದೇವೆ. ಪ್ರಾರಂಭದಲ್ಲಿ ನಮಗೆ ಫ್ರೀ ಟಿಕೆಟ್ ಕೊಡುತ್ತಿರಲಿಲ್ಲ ಎಂದರು.
ಪ್ಯಾಂಟ್ ಶರ್ಟ್ ಹಾಕಿದ್ದೀರಾ ಎಂದು ಫ್ರೀ ಟಿಕೆಟ್ ಕೊಡುತ್ತಿರಲಿಲ್ಲ. ನಮಗೆ ಸರ್ಕಾರ ಕೊಟ್ಟಿರುವ ಟಿಜಿ ಕಾರ್ಡ್ ತೋರಿಸಿದ ಮೇಲೆ ಕೊಡುತ್ತಾರೆ. ಮಹಿಳೆಯರಂತೆ ನಮ್ಮನ್ನು ಗ್ಯಾರಂಟಿ ಯೋಜನೆಗಳಿಗೆ ಪರಿಗಣಿಸಿದ್ದಕ್ಕೆ ಸಿಎಂಗೆ ಥ್ಯಾಂಕ್ಸ್ ಹೇಳಬೇಕು. ನಮ್ಮೆಲ್ಲ ಟ್ರಾನ್ಸ್ ಜೆಂಡರ್‌ಗಳ ಪರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ತಿಳಿಸಿದರು.





