Mysore
16
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಸೆಪ್ಟೆಂಬರ್.‌26ರಿಂದ ದಸರಾ ಗೋಲ್ಡ್‌ ಪಾಸ್‌ ಮಾರಾಟ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ದಸರಾ ಗೋಲ್ಡ್‌ ಪಾಸ್‌ ವಿತರಣೆಗೆ ದಿನಾಂಕ ನಿಗದಿಯಾಗಿದೆ.

ಈ ಬಾರಿ 21 ದಿನಗಳ ಕಾಲ ದಸರಾ ವಿದ್ಯುತ್‌ ದೀಪಾಲಂಕಾರ ಆಯೋಜನೆ ಮಾಡಲಾಗುತ್ತಿದ್ದು, ದಸರಾ ಮುಗಿದ ಬಳಿಕವೂ 10 ದಿನಗಳ ಕಾಲ ವಿದ್ಯುತ್‌ ದೀಪಾಲಂಕಾರ ವಿಸ್ತರಣೆ ಮಾಡಲಾಗುತ್ತದೆ.

ದಸರಾ ನೋಡಲು ಎಲ್ಲರಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ 5 ದಿನಗಳ ಕಾಲ ಕಾರ್ಡ್‌ ಹಾಗೂ ಟಿಕೆಟ್‌ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸೆಪ್ಟೆಂಬರ್.‌26ರಿಂದ 30 ರವರೆಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಪ್ರತಿನಿತ್ಯ 1000 ದಿಂದ 1500 ಗೋಲ್ಡ್‌ ಕಾರ್ಡ್‌ಗಳು ಮಾರಾಟವಾಗಲಿವೆ ಎಂಬ ಮಾಹಿತಿ ಬಂದಿದೆ. ಒಂದು ದಸರಾ ಗೋಲ್ಡ್ ಕಾರ್ಡ್‌ಗೆ 6500 ರೂಪಾಯಿ ನಿಗದಿಗೊಳಿಸಲಾಗಿದೆ.

ಜಂಬೂಸವಾರಿ ಮೆರವಣಿಗೆ ವೀಕ್ಷಣೆಗೆ ಟಿಕೆಟ್‌ ದರ 3500 ರೂಪಾಯಿ ನಿಗದಿಯಾಗಿದ್ದು, ಪಂಜಿನ ಕವಾಯತು ವೀಕ್ಷಣೆಗೆ ದರ 1000 ರೂಪಾಯಿ ನಿಗದಿಗೊಳಿಸಲಾಗಿದೆ.

 

Tags:
error: Content is protected !!