Mysore
26
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಸಿಎಂಗೆ ರೈತ ಹಿತಕ್ಕಿಂತಲೂ ರಾಜಕೀಯವೇ ಮುಖ್ಯವಾಗಿದೆ : ಯದುವೀರ್‌ ಆರೋಪ 

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯದ ರೈತರ ಹಿತಕ್ಕಿಂತಲೂ ರಾಜಕೀಯವೇ ಮುಖ್ಯ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕಿರುವುದು ರಾಜ್ಯ ಸರ್ಕಾರದ ಜವಾಬ್ದಾರಿ. ನೀತಿ ಆಯೋಗದ ಸಭೆಗೆ ರೇವಂತ್ ರೆಡ್ಡಿ, ಸ್ಟಾಲಿನ್ ಸೇರಿದಂತೆ ಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳೆಲ್ಲ ಹೋಗುತ್ತಾರೆ. ಆದರೆ ಕರ್ನಾಟಕದ ಮುಖ್ಯಮಂತ್ರಿ ಮಾತ್ರ ಗೈರಾಗುತ್ತಾರೆ ಎಂದರು.

ಇದನ್ನು ಓದಿ : ರಾಜ್ಯಕ್ಕೆ 9 ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ : ಕೇಂದ್ರ ಸ್ಪಂದನೆ

ಮೈಸೂರಿನ ಕಾಡಂಚಿನ ಗ್ರಾಮಗಳಲ್ಲಿ ಹುಲಿ ದಾಳಿಯಿಂದಾಗಿ ಅಪಾರ ಪ್ರಮಾಣದ ಸಾವು ನೋವುಗಳಾದವು. ಆದರೆ ಯಾವುದಕ್ಕೂ ರಾಜ್ಯಸರ್ಕಾರ ಸ್ಪಂದಿಸಲಿಲ್ಲ. ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ೨೯೩ ಕಿ.ಮೀ. ನಾಗರಹೊಳೆ ಅಭಯಾರಣ್ಯದ ಗಡಿ ಇದೆ. ಈ ಪೈಕಿ ಕುಟ್ಟ, ಹುಣಸೂರು ಭಾಗದಲ್ಲಿ ರೈಲ್ವೆ ಬ್ಯಾರಿಕೇಡ್, ಕಂದಕ ನಿರ್ಮಾಣ ಮಾಡಲಾಗಿದೆ. ರೈಲ್ವೆ ಬ್ಯಾರಿಕೇಡ್‌ಗೆ ಮೂರು ಕಂಬಿಗಳನ್ನು ಅಳವಡಿಸುವಂತೆ ರೈತರು ಕೇಳುತ್ತಿದ್ದಾರೆ. ಮನವಿಯನ್ನು ಪರಿಗಣಿಸುವಂತೆ ಸೂಚನೆ ನೀಡಲಾಗಿದೆ ಎಂದರು.

Tags:
error: Content is protected !!