Mysore
21
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ನಿಖಿಲ್‌ ಅವರನ್ನು ಸಿಎಂ ಸ್ಥಾನದಲ್ಲಿ ನೋಡುವುದೇ ನಮ್ಮ ಕನಸು: ಶಾಸಕ ಜಿ.ಡಿ.ಹರೀಶ್‌ ಗೌಡ

Our dream is to see Nikhil as CM MLA G D Harish Gowda

ಮೈಸೂರು: ಜೆಡಿಎಸ್ ಪಕ್ಷದ ಭವಿಷ್ಯದ ದೃಷ್ಟಿಯಿಂದ ನಿಖಿಲ್ ಕುಮಾರಸ್ವಾಮಿ ರಾಜ್ಯಾಧ್ಯಕ್ಷರಾಗಬೇಕು ಎಂದು ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಭವಿಷ್ಯದ ದೃಷ್ಟಿಯಿಂದ ನಿಖಿಲ್ ಕುಮಾರಸ್ವಾಮಿ ರಾಜ್ಯಾಧ್ಯಕ್ಷರಾಗಬೇಕು. ಹೆಚ್‌.ಡಿ.ದೇವೇಗೌಡರಿಗಾಗಲಿ, ಕುಮಾರಸ್ವಾಮಿಯವರಿಗಾಗಲಿ, ನಿಖಿಲ್ ಅವರಿಗಾಗಲಿ ಈ ಆಸೆ ಹಾಗೂ ಉದ್ದೇಶ ಇಲ್ಲ. ಆದರೆ ಜೆಡಿಎಸ್‌ನ ಶಾಸಕರಿಗೆ, ಕಾರ್ಯಕರ್ತರಿಗೆ ನಿಖಿಲ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಉದ್ದೇಶವಿದೆ. ನಿಖಿಲ್ ಅವರನ್ನು ಸಿಎಂ ಸ್ಥಾನದಲ್ಲಿ ನೋಡುವುದು ನಮ್ಮ ಕನಸು. ದೇವೇಗೌಡರ ನಂತರ ಕುಮಾರಸ್ವಾಮಿ ಹೇಗೆ ಪಕ್ಷ ಕಟ್ಟಿ ಮುಂದುವರೆಸಿದರೋ, ಅದೇ ರೀತಿ ನಿಖಿಲ್ ಕೂಡ ಮುಂದುವರೆಸುತ್ತಾರೆ. ನಿಖಿಲ್ ಅವರಿಗೆ ಆ ಶಕ್ತಿ ಇದೆ. ಆಗಸ್ಟ್‌ನಲ್ಲಿ ಮೈಸೂರು ಜಿಲ್ಲೆಯಲ್ಲಿ ನಿಖಿಲ್ ಪ್ರವಾಸ ಮಾಡಲಿದ್ದಾರೆ‌ ಎಂದು ಹೇಳಿದರು.

Tags:
error: Content is protected !!