Mysore
26
clear sky

Social Media

ಗುರುವಾರ, 22 ಜನವರಿ 2026
Light
Dark

ಗ್ರೇಟರ್‌ ಮೈಸೂರು ಯೋಜನೆ ನಿರ್ಮಾಣಕ್ಕೆ ಆಕ್ಷೇಪ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೇಲ್ ಸೇತುವೆ, ಸುರಂಗ ಮಾರ್ಗ ನಿರ್ಮಾಣ ಹಾಗೂ ಗ್ರೇಟರ್ ಮೈಸೂರು ಯೋಜನೆ ಸೂಕ್ತವಲ್ಲ ಎಂದು ಮೈಸೂರು ರಕ್ಷಣಾ ವೇದಿಕೆ ವಿರೋಧ ವ್ಯಕ್ತಪಡಿಸಿದೆ.

ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಂದ ಮೈಸೂರು ರಾಜ್ಯದ ಅಭಿವೃದ್ಧಿ ಪ್ರಾರಂಭವಾಗಿ ಬಹಳಷ್ಟು ದಿವಾನರು, ದಕ್ಷ ಅಧಿಕಾರಿಗಳು ಅದಕ್ಕಾಗಿ ಶ್ರಮಿಸಿದ್ದಾರೆ. ಇಂತಹ ಪಾರಂಪರಿಕ ನಗರಕ್ಕೆ ಗ್ರೇಟರ್ ಮೈಸೂರು ಎಂದು ಹೆಸರು ಬದಲಿಸ ಹೊರಟಿರುವುದು ಸರಿಯಲ್ಲ ಎಂದು ವೇದಿಕೆಯ ಅಧ್ಯಕ್ಷ ಮೈ.ಕಾ.ಪ್ರೇಮ್‌ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದನ್ನು ಓದಿ: ಗ್ರೇಟರ್ ಮೈಸೂರು ರಚನೆಗೆ ಮರುಜೀವ

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೂ ಮೇಲ್ಸೇತುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ಉಲ್ಲೇಖಿಸಿರುವ ವಿನೋಬಾ ರಸ್ತೆ, ಜೆಎಲ್‌ಬಿ ರಸ್ತೆಗಳಲ್ಲಿ ಪಾರಂಪರಿಕ ಕಟ್ಟಡಗಳಿದ್ದು, ಭೂಗತ ನೀರಿನ ಪೈಪ್‌ಲೈನ್ ಸಹ ಹಾದು ಹೋಗಿದೆ. ಹೀಗಾಗಿ ಇಲ್ಲಿ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳುವುದು ಸೂಕ್ತವಲ್ಲ ಎಂದು ತಿಳಿಸಿದರು.

ನಗರದಲ್ಲಿ ಕುಡಿಯುವ ನೀರು, ಒಳ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಕಸದ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ. ಪಾದಚಾರಿ ಮಾರ್ಗಗಳ ಒತ್ತುವರಿಯಾಗಿದೆ. ರಸ್ತೆಗಳು ಹದಗೆಟ್ಟಿವೆ. ಹೀಗಾಗಿ ಇಂತಹ ಸಮಸ್ಯೆಗಳನ್ನು ಬಗೆಹರಿಸುವತ್ತ ಸರ್ಕಾರ ಕೂಡಲೇ ಗಮನಹರಿಸಬೇಕು ಎಂದು ಆಗ್ರಹಿಸಿದರು.

ವೇದಿಕೆಯ ಮುಖಂಡರಾದ ಕುಮಾರಗೌಡ, ಗುರುರಾಜ್, ಸಂಜಯ್, ಪ್ರಮೋದ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Tags:
error: Content is protected !!