Mysore
25
clear sky

Social Media

ಗುರುವಾರ, 22 ಜನವರಿ 2026
Light
Dark

ಮೈಸೂರು| ಮದುವೆ ಆಗುವುದಾಗಿ ನಂಬಿಸಿ ವಕೀಲೆಗೆ ಮೋಸ

ಮೈಸೂರು: ಮದುವೆ ಆಗುವುದಾಗಿ ನಂಬಿಸಿ ಮಹಿಳಾ ವಕೀಲೆಯೊಬ್ಬರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ನಂತರ ಮೋಸ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವಕೀಲ ಹಾಗೂ ಅವರ ಕುಟುಂಬದ 5 ಮಂದಿ ವಿರುದ್ಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಕೀಲೆ ಕಾಜಲ್‌ ಪ್ರಸಾದ್‌ ಎಂಬುವವರೇ ವಂಚನೆಗೆ ಒಳಗಾದವರಾಗಿದ್ದಾರೆ. ಮದುವೆ ಆಗುವುದಾಗಿ ವಂಚಿಸಿದ ನವೀನ್‌ ಪೊನ್ನಯ್ಯ ಹಾಗೂ ಇವರ ತಂದೆ ಪಿ.ಕೆ.ಪೊನ್ನಯ್ಯ, ತಾಯಿ ಕುಮಾರಿ, ಪತ್ನಿ ಲಕ್ಷಿತ್‌ ಚಿಂಗಪ್ಪ, ದೊಡ್ಡಮ್ಮನ ಮಗಳು ಸುಮ ಹಾಗೂ ಬೆಳಿಯಪ್ಪ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾಜಲ್‌ ಪ್ರಸಾದ್‌ ಅವರು ವಕೀಲ ನವೀನ್‌ ಪೊನ್ನಯ್ಯ ಜೊತೆ ಹಲವು ವರ್ಷಗಳಿಂದ ಪರಿಚಯ ಇದ್ದರು. ನವೀನ್‌ ಪೊನ್ನಯ್ಯ ತಮ್ಮ ಪತ್ನಿ ಜೊತೆ ಹೊಂದಾಣಿಕೆ ಇಲ್ಲವೆಂದು ಕಾರಣ ನೀಡಿ ಹೆಚ್ಚು ಒಡನಾಟ ಬೆಳೆಸಿಕೊಂಡಿದ್ದರು.

ನವೀನ್‌ ತಾಯಿ ಕಾಜಲ್‌ ಪ್ರಸಾದ್‌ ಮನೆಗೆ ಬಂದು ಮದುವೆ ಪ್ರಸ್ತಾಪ ಮಾಡಿ ಎಂಗೇಜ್‌ಮೆಂಟ್‌ ಮಾಡಿಕೊಂಡು ಡಿಸೆಂಬರ್.‌7ರಂದು ವಿವಾಹ ನಿಶ್ಚಯಿಸಿದ್ದರು. ಮದುವೆ ಫಿಕ್ಸ್‌ ಆದ ಹಿನ್ನೆಲೆಯಲ್ಲಿ ಇಬ್ಬರೂ ದೈಹಿಕ ಸಂಪರ್ಕ ಬೆಳೆಸಿದ್ದರು.

ಹೀಗಿರುವಾಗಲೇ ನವೀನ್‌ ಪೊನ್ನಯ್ಯ ನನಗೆ ಇನ್ನೂ ವಿಚ್ಚೇದನ ಆಗಿಲ್ಲ. ಪರಿಹಾರ ವಿಚಾರ ಕಂಡುಕೊಳ್ಳುವುದಾಗಿ ಹಾಗೂ ನಮ್ಮ ಯೋಜನೆಯಂತೆ ಮದುವೆ ನಡೆಯಲಿದೆ ಎಂದು ಮೆಸೇಜ್‌ ಮಾಡಿ ಸ್ವಿಚ್‌ ಆಫ್‌ ಮಾಡಿಕೊಂಡಿದ್ದರು.

ಈ ಬೆನ್ನಲ್ಲೇ ಗಾಬರಿಯಾದ ಕಾಜಲ್‌ ಪ್ರಸಾದ್‌ ಅವರು, ಇದೀಗ ಮದುವೆ ಆಮಂತ್ರಣ ಪತ್ರಿಕೆಗಳನ್ನು ವಿತರಿಸಲಾಗಿದೆ. ಆದರೆ ನವೀನ್‌ ಪೊನ್ನಯ್ಯ ಸಂಪರ್ಕಕ್ಕೆ ಸಿಗುತ್ತಿಲ್ಲ. ತಂದೆ ತಾಯಿ ಜೊತೆ ಮಾತನಾಡಿದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನವೀನ್‌ ಪೊನ್ನಯ್ಯ ಹಾಗೂ ಇತರರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಕಾಜಲ್‌ ಪ್ರಸಾದ್‌ ಪ್ರಕರಣ ದಾಖಲಿಸಿದ್ದಾರೆ.

Tags:
error: Content is protected !!