ಮೈಸೂರು| ಕೆ.ಆರ್.ನಗರ ತಾಲ್ಲೂಕಿನ ಚಿಕ್ಕಕೊಪ್ಪಲು ಗ್ರಾಮದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಶಬರಿಮಲೆ ಯಾತ್ರಾರ್ಥಿಗಳಿಗೆ ಉಚಿತ ಆಂಬುಲೆನ್ಸ್ ಸೇವೆ ಒದಗಿಸಿದ್ದಾರೆ.
ಕರ್ನಾಟಕದಿಂದ ಶಬರಿಮಲೆಗೆ ತೆರಳುವ ಭಕ್ತರಿಗಾಗಿಯೇ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದ್ದು, ಇಂದು ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಆಂಬುಲೆನ್ಸ್ ಸೇವೆಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.
ಇದನ್ನು ಓದಿ: ಮುಕ್ತಾಯಗೊಂಡ ಮಂಡಲ-ಮಕರವಿಳಕ್ಕು ಮಹೋತ್ಸವ: ಮುಚ್ಚಿದ ಶಬರಿಮಲೆ ದೇವಾಲಯ
ಈ ವೇಳೆ ಮಾತನಾಡಿದ ಪುನೀತ್ ಅಭಿಮಾನಿಗಳು, ಸರ್ಕಾರ ಮಾಡದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಕರ್ನಾಟಕದಿಂದ ಹೋಗುವ ಭಕ್ತರಿಗೆ ಏನೇ ತೊಂದರೆ ಆದರೂ ಈ ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿ. ಆಗ ತೊಂದರೆಯಾಗಿರುವ ಭಕ್ತರಿಗೆ ಅನುಕೂಲವಾಗುತ್ತದೆ. ಈ ವಿಚಾರವನ್ನು ಆದಷ್ಟು ಶೇರ್ ಮಾಡಿ. ಆಂಬುಲೆನ್ಸ್‌ನಲ್ಲಿ ಕನ್ನಡದಲ್ಲೇ ಮಾಹಿತಿ ಇರುತ್ತದೆ. ಹಾಗಾಗಿ ಇದು ಎಲ್ಲರಿಗೂ ಅನುಕೂವಾಗುತ್ತದೆ. ಶಬರಿಮಲೆಗೆ ಹೋಗುವ ಎಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.




