ಕೇರಳ: ಮಂಡಲ-ಮಕರವಿಳಕ್ಕು ಮಹೋತ್ಸವ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಶಬರಿಮಲೆ ಅಯ್ಯಪ್ಪ ದೇವಾಲಯವನ್ನು ಮುಚ್ಚಲಾಯಿತು.
ಈ ಬಗ್ಗೆ ಮಾಹಿತಿ ನೀಡಿರುವ ಟಿಡಿಬಿ, 2024-25ರ ತೀರ್ಥಯಾತ್ರೆಯ ಖುತುವಿನಲ್ಲಿ ಶಬರಿಮಲೆ ಸನ್ನಿಧಾನಕ್ಕೆ ಲಕ್ಷಾಂತರ ಸಾರ್ವಜನಿಕರು ಹರಿದು ಬಂದಿದೆ. ಸುಮಾರು 53 ಲಕ್ಷ ಮಂದಿ ಶಬರಿಮಲೆಗೆ ಬಂದಿರುವುದಾಗಿ ಟಿಡಿಬಿ ಮಾಹಿತಿ ನೀಡಿದೆ.
ಈ ಹಿನ್ನೆಲೆಯಲ್ಲಿ ಇಂದು ಪಂದಳ ರಾಜ ಕುಟುಂಬದ ಪ್ರತಿನಿಧಿ ತ್ರಿಕ್ಕೇಟನಲ್ ರಾಜರಾಜ ಶರ್ಮಾ ಅವರು ದರ್ಶನ ಪಡೆದ ಬಳಿಕ ಬೆಳಿಗ್ಗೆ 6.30ಕ್ಕೆ ದೇವಾಲಯವನ್ನು ಮುಚ್ಚಲಾಯಿತು.
ಬಳಿಕ ದೇವಾಲಯದ ಕೀಲಿಗಳನ್ನು ರಾಜಮನೆತನದ ಪ್ರತಿನಿಧಿಗೆ ಹಸ್ತಾಂತರಿಸಲಾಯಿತು. 18 ಮೆಟ್ಟಿಲುಗಳನ್ನು ಇಳಿದು, ಸಾಂಪ್ರದಾಯಿಕ ವಿಧಿವಿಧಾನಗಳನ್ನು ನಡೆಸಲಾಯಿತು.