ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿರುದ್ಧ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವಹೇಳನ ಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಅಮಿತ್ ಶಾ ವಿರುದ್ಧ ಮೈಸೂರಿನಲ್ಲಿ ಪ್ರಗತಿಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದು, ಅನೇಕ ಕಡೆಗಳಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ.
ಇಂದು(ಜನವರಿ.7) ದಲಿತ ಸಂಘರ್ಷ ಸಮಿತಿ ಜಿಲ್ಲ ಶಾಖೆ ಕೂಡ ಬಂದ್‌ಗೆ ಬೆಂಬಲ ಸೂ ಚಿಸಿದ್ದು, ಇಟ್ಟಿಗೆ ಗೂಡಿನ ತರಕಾರಿ ಮಾರುಕಟ್ಟೆಯಲ್ಲಿ ಯಾವುದೇ ವ್ಯಾಪರ ವಹಿವಾಟು ನಡೆಯದೇ ತರಕಾರಿ ಮಾರುಕಟ್ಟೆ ಖಾಲಿ ಖಾಲಿ ಆಗಿದೆ. ಅಲ್ಲದೇ ಈ ಬಂದ್ ಹಿನ್ನೆಲೆ ರಸ್ತೆ ತಡೆ ನಡೆದಿದ್ದು, ಸಾರಿಗೆ ಬಸ್‌ಗಳು ಸರಿಯಾದ ಸಮಯಕ್ಕೆ ಬಾರದೇ ಗ್ರಾಮಾಂತರ ಬಸ್ ನಿಲ್ದಾಣ ಸಂಪೂರ್ಣ ಸ್ತಬ್ಧವಾಗಿದೆ.
ನಗರದಲ್ಲಿ ಈ ಕುರಿತು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಂ ಅವರು ಮಾತನಾಡಿ, ಇಂದಿನ ಬಂದ್‌ನ ಪ್ರಮುಖ ಉದ್ದೇಶ ಕೇಂದ್ರ ಸಚಿವ ಅಮಿತ್ ಅವರು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿರುವುದಕ್ಕೆ ಮೈಸೂರು ಬಂದ್‌ಗೆ ಕರೆ ನೀಡಿದ್ದೇವೆ. ಈ ಬಂದ್ ಬೆಳಿಗ್ಗೆ 7 ಗಂಟೆಯಿಂದ ಯಶ್ವಸಿಯಾಗಿದ್ದು, ಸ್ವಯಂ ಘೋಷಿತವಾಗಿ ಮಾರುಕಟ್ಟೆಗಳು ಮತ್ತು ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.
ಇನ್ನೂ ನಗರ ಬಸ್ ನಿಲ್ದಾಣ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಗಳಲ್ಲಿ ಯಾವುದೇ ರೀತಿಯ ಬಸ್ ವ್ಯವಸ್ಥೆ ಇಲ್ಲದೇ ಖಾಲಿ ಖಾಲಿಯಾಗಿದೆ. ಈ ದಿನ ಸಾರ್ವಜನಿಕರಿಗೆ ತೊಂದರೆಯಾಗಬಹುದು. ಆದರೆ ಸಂವಿಧಾನವನ್ನು ರಕ್ಷಣೆ ಮಾಡಬೇಕೆಂಬ ಹಿತದೃಷ್ಟಿಯಿಂದ ಇದನ್ನು ಮಾಡಲೇಬೇಕು. ಜವಾಬ್ದಾರಿಯುತ ಕೇಂದ್ರ ಸಚಿವರಾಗಿ ಸಂವಿಧಾನವನ್ನು ಅವಹೇಳನಕಾರಿ ಮಾಡುವುದು ತೀವ್ರ ಖಂಡನೀಯ. ಹೀಗಾಗಿ ಈ ಕೂಡಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿಗಳು, ಕೇಂದ್ರ ಸಚಿವ ಸಂಪುಟದಿಂದ ಅವರನ್ನು ವಜಾಗೊಳಿಸಬೇಕು ಎಂದು ಮೈಸೂರುಗೆ ಬಂದ್‌ಗೆ ಕರೆ ನೀಡಲಾಗಿದೆ ಎಂದು ಹೇಳಿದ್ದಾರೆ.