ಮೈಸೂರು: ಗಾಳಿಪಟ ದಾರಕ್ಕೆ ಸಿಲುಕಿ ನರಳಾಡುತ್ತಿದ್ದ ಹದ್ದನ್ನು ರಕ್ಷಿಸುವಲ್ಲಿ ಪರಿಸರ ಪ್ರೇಮಿ ಸೂರಜ್ ಯಶಸ್ವಿಯಾಗಿದ್ದಾರೆ.
ಮೈಸೂರು ನಗರದ ಮಂಡಿ ಮೊಹಲ್ಲಾದಲ್ಲಿ ಕಾಂಪೌಂಡ್‌ವೊಂದರಲ್ಲಿ ಹದ್ದೊಂದು ಗಾಳಿಪಟ ದಾರಕ್ಕೆ ಸಿಲುಕಿ ಒದ್ದಾಡುತ್ತಿತ್ತು. ಇದನ್ನು ಕಂಡ ಸೂರಜ್ ಎಂಬುವವರು ಹದ್ದನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ನಂತರ ಮಾತನಾಡಿದ ಸೂರಜ್, ಗಾಳಿಪಟ ಹಾರಿಸುವಾಗ ಎಚ್ಚರವಿರಲಿ. ದಾರಗಳನ್ನು ಎಲ್ಲೆಂದರಲ್ಲಿ ಬಿಡಬೇಡಿ. ಇದರಿಂದ ಪುಟ್ಟ ಪಕ್ಷಿ-ಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಪ್ರತಿಯೊಂದು ಪ್ರಾಣಿ-ಪಕ್ಷಿಗಳನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿ ಎಂದು ಮನವಿ ಮಾಡಿದರು.





