ಮೈಸೂರು: ನನ್ನ ಕಂಡ್ರೆ ಬಿಜೆಪಿಗೆ ಭಯ ಎಂದು ಹೇಳುವ ಮೂಲಕ ಸಿಎಂ ಬದಲಾವಣೆ ಬಗ್ಗೆ ಬಿಜೆಪಿಯ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಇಂದು ಮಾತನಾಡಿದ ಅವರು, ಸಿಎಂ ಚೇಂಜ್ ಆಗುತ್ತಾರೆ ಎಂದು ಬಿಜೆಪಿ ನಾಯಕರು ಹೇಳುತ್ತಲೆ ಇರುತ್ತಾರೆ. ಸಿಎಂ ಚೇಂಜ್ ಪ್ರಶ್ನೆಯೆ ಇಲ್ಲ. ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಿಎಂ ಬದಲಾವಣೆ ಆಗಿಯೆ ಹೋಯ್ತು ಎಂದು ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುತ್ತಾರೆ. ಬದಲಾವಣೇ ಆಗಿದ್ಯಾ? ಎಂದು ಪ್ರಶ್ನಿಸಿದರು.
ಬಿಜೆಪಿ ಸಂಪೂರ್ಣವಾಗಿ ಎರಡು ಭಾಗವಾಗಿದೆ. ಇತ್ತೀಚಿನ ದಿನಗಳಲ್ಲಿ ಅದು ಬಹಿರಂಗವಾಗುತ್ತಿದೆ. ಬಿಜೆಪಿ ನಾಯಕರೇ ಒಬ್ಬರಿಗೊಬ್ಬರು ಏಕವಚನದಲ್ಲಿ ಬೈಯ್ದಾಡುತ್ತಿದ್ದಾರೆ. ಅಶೋಕ್ ಮೊದಲು ಅದನ್ನು ಸರಿ ಮಾಡಲಿ. ಅದನ್ನು ಬಿಟ್ಟು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಪ್ರತ್ಯಾರೋಪ ಮಾಡಿದರು.
ಮುಂದುವರಿದು ಮಾತನಾಡುತ್ತಾ, ನಾನು ಗಂಟು ಮೂಟೆ ಕಟ್ಟಿದ್ದೇನೆ ಎಂದು ಬಿಜೆಪಿಯವರು ಬಹಳಷ್ಟು ಬಾರಿ ಭ್ರಷ್ಟಚಾರದ ಅಪಪ್ರಚಾರ ಮಾಡಿದರು. ಆದರೆ ಉಪಚುನಾವಣೆ ಗೆಲ್ಲಲಿಲ್ವಾ? ಜೆಡಿಎಸ್ ಉತ್ತರಾಧಿಕಾರಿ ಹಾಗೂ ಅಧ್ಯಕ್ಷನಾಗಲು ಹೊರಟಿದ್ದವರನ್ನೆ ಅವರ ಕ್ಷೇತ್ರದಲ್ಲಿ ಸೋಲಿಸಿದ್ದೇವೆ. ಇದು ನಮಗೆ ಜನರು ಮಾಡುತ್ತಿರುವ ಆಶೀರ್ವಾದ. ಮುಂದೆನೂ ಕಾಂಗ್ರೆಸ್ ಪರವಾದ ಅಲೆ ಇರುತ್ತದೆ ಎಂದರು.