ಮಡದಿ ಹೆಸರಿನಲ್ಲಿ ಬದಲಿ ನಿವೇಶನ ಪಡೆದ ಆರೋಪಕ್ಕೆ ವಿಶ್ವನಾಥ್ ಸ್ಪಷ್ಟನೆ

ಮೈಸೂರು : ಮಡದಿ ಹೆಸರಿನಲ್ಲಿ ಬದಲಿ ನಿವೇಶನ ಪಡೆದ ಆರೋಪಕ್ಕೆ ಸಂಬಂಧಪಟ್ಟಂತೆ ಇಂದು ಸುದ್ದಿಗೋಷ್ಠಿ ನಡೆಸಿ ವಿಧಾನ ಪರಿಷತ್‌ ಸದಸ್ಯ ಎಚ್.‌ ವಿಶ್ವನಾಥ್‌ ಸ್ಪಷ್ಟನೆ ನೀಡಿದ್ದಾರೆ.

ʻ೨೦೦೧ ರಲ್ಲಿ ನನ್ನ ಮಡದಿ ಹೆಸರಿನಲ್ಲಿ ನಿವೇಶನಕ್ಕೆ ಅರ್ಜಿ ಹಾಕಿದ್ದೇವು. ಆದರೆ ೨೦೨೨ ರಲ್ಲಿ ಒಂದು ನಿವೇಶನ ಮಂಜೂರಾಗಿ ಆಗಿದೆ. ಅಲ್ಲಿ ವರುಣ ನಾಲೆ ಹಾದುಹೋಗಿದೆ. ಅಲ್ಲಿಯ ನಿವೇಶನ ಹಳ್ಳಬಿದ್ದು ಸರಿಯಿಲ್ಲದ ಕಾರಣ ಅದರ ಬದಲಾಗಿ ಅಲ್ಲೆ ಅದೇ ಬಡಾವಣೆಯಲ್ಲಿ ಬೇರೆಡೆ ೧೨*೧೮ ಮೀಟರ್‌ ಬದಲಿ ನಿವೇಶನ ಕೊಟ್ಟಿದ್ದಾರೆ. ಅಲ್ಲೆ ಕೊಟ್ಟಿದ್ದಾರೆ ಹೊರತು ಬೇರೆ ಬಡಾವಣೆಯಲ್ಲಿ ಕೊಟ್ಟಿಲ್ಲ. ಇದರ ಬಗ್ಗೆ ಮುಡಾ ಸಭೆಯಲ್ಲಿ ಅನುಮೋದನೆ ಆಗಿದೆ ಎಂದು ಸಾಕ್ಷ್ಯಧಾರ ಮುಂದಿಟ್ಟು ಸ್ಪಷ್ಟನೆ ಕೊಟ್ಟಿದ್ದಾರೆ.

ಇನ್ನು ವಿಶ್ವನಾಥ್‌ ರಾಜಕೀಯ ದಿವಾಳೆ ಎಂಬ ಹರೀಶ್‌ ಗೌಡ, ಮರೀಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ರಾಜಕೀಯ ದಿವಾಳಿ ಆಗಿಲ್ಲ. ದಿವಾಳಿ ಆಗಿರೋರು ನೀವು. ನಿವೇಲ್ಲಾ ಸೇರಿ ಸಿದ್ದರಾಮಯ್ಯ ಅವರನ್ನ ದಿವಾಳಿ ಮಾಡುತ್ತಿದ್ದೀರಾ. ನಾನು ಈಗಲೂ ಹೇಳುತ್ತೇನೆ ಪ್ರಾಮಾಣಿಕವಾಗಿ ನಾನು ಬುದುಕಿದ್ದೇನೆ ಹೊರತು ನಿಮ್ಮ ಹಾಗೆ ಬದುಕಿಲ್ಲ ಎಂದು ವಾಗ್ದಾಳಿ ನಡೆಸಿ ತಿರುಗೇಟು ಕೊಟ್ಟಿದ್ದಾರೆ.