Mysore
21
few clouds

Social Media

ಸೋಮವಾರ, 12 ಅಕ್ಟೋಬರ್ 2026
Light
Dark

ನಾಳೆ ಸಿಎಲ್‌ಪಿ ಸಭೆ ಕರೆದಿದ್ದೇವೆ, ಸಿದ್ದರಾಮಯ್ಯ ಜತೆ ಚರ್ಚಿಸಿದ್ದೇನೆ : ಡಿ.ಕೆ.ಶಿವಕುಮಾರ್‌

ಹೊಸದಿಲ್ಲಿ : ಕಳೆದ ಎರಡ್ಮೂರು ದಿನಗಳಿಂದ ಮೌನಕ್ಕೆ ಶರಣಾಗಿದ್ದ ಡಿಕೆ ಶಿವಕುಮಾರ್ ಕೊನೆಗೂ ತುಟಿ ಬಿಚ್ಚಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದ ಬೆನ್ನಲ್ಲೇ ಡಿ.ಕೆ ಶಿವಕುಮಾರ್ ಸಹ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಹೊಸ ಸಚಿವ ಸಂಪುಟದ ಬಗ್ಗೆ ಚರ್ಚೆ ನಡೆಸಿದ್ದಾರೆ.

ಇನ್ನು ಇದೇ ವೇಳೆ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ನಾಳೆ (ಮೇ 30) ಸಿ.ಎಲ್.ಪಿ ಸಭೆ (ಕಾಂಗ್ರೆಸ್ ಶಾಸಕಾಂಗ ಸಭೆ) ಕರೆದಿದ್ದು, ಹೈಕಮಾಂಡ್ ನಾಯಕರು ವೀಕ್ಷಕರಾಗಿ ಬರಲಿದ್ದಾರೆ. ಹೀಗಾಗಿ ಯಾವುದೇ ಶಾಸಕರು ದೆಹಲಿಗೆ ಬರಬೇಡಿ ಎಂದು ಹೇಳಿದ್ದೇವೆ. ಕೆಲ ವಿಚಾರಗಳನ್ನ ಸಿದ್ದರಾಮಯ್ಯನವರು ನಾವು ಚರ್ಚೆ ಮಾಡಿದ್ದೇವೆ. ಸಿ.ಎಲ್.ಪಿ ಬಳಿಕ ಪ್ರಮಾಣ ವಚನಕ್ಕೆ ದಿನ ನಿಗಧಿಯಾಗಲಿದೆ ಎಂದು ಸ್ಪಷ್ಟಪಡಿಸಿದರು.

Tags:
error: Content is protected !!