ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡದ ಚಲನಚಿತ್ರಗಳು ಪ್ರದರ್ಶಿತವಾಗುತ್ತವೆ. ಗ್ರಾಹಕರಿಗೆ ನೀಡುವ ಟಿಕೆಟಿನಲ್ಲಿ ಸಿನಿಮಾದ ಹೆಸರೂ ಅಚ್ಚಾಗಿರುತ್ತದೆ.ಆದರೆ… ಕನ್ನಡ ಚಿತ್ರಕ್ಕೆ ಖರೀದಿಸುವ ಟಿಕೆಟ್‌ನಲ್ಲಿ ಚಿತ್ರದ ಹೆಸರು ಆಂಗ್ಲಭಾಷೆಯಲ್ಲಿರುತ್ತದೆ. ಅದು ಕನ್ನಡದಲ್ಲಿ ಇರುವುದು ಒಳ್ಳೆಯದಲ್ಲವೇ?
ಇನ್ನು ಮೇಲೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರ ಪ್ರೇಕ್ಷಕರಿಗೆ ಕಡೇ ಪಕ್ಷ ಚಿತ್ರದ ಹೆಸರನ್ನಾದರೂ ಕನ್ನಡದಲ್ಲಿಯೆ ಅಚ್ಚಾದ ಟಿಕೆಟುಗಳನ್ನು ವಿತರಿಸುವುದು ಸೂಕ್ತ. ಟಿಕೆಟುಗಳಲ್ಲಿ ಕನ್ನಡ ಕಾಣಿಸುವಂತೆ ಮಾಡಲು ಯಾವ ಹೆಚ್ಚುವರಿ ತಂತ್ರಜ್ಞಾನದ ಅಗತ್ಯವಿರುವುದಿಲ್ಲವಲ್ಲವೇ?
-ಡಿ. ವಿ. ಎಂ. ಪ್ರಕಾಶ್, ಮೈಸೂರು


