ಮೈಸೂರು: ನಾಡದೇವತೆ ಚಾಮುಂಡೇಶ್ವರಿ ರಥೋತ್ಸವವು ದಸರಾದ ಒಂದು ಭಾಗವೇ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
ಈ ಕುರಿತು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಇಂದು ರಥೋತ್ಸವದ ಸಂಭ್ರಮ ಮನೆಮಾಡಿದೆ.
ಇದನ್ನು ಓದಿ : ಚಾಮುಂಡಿಬೆಟ್ಟದಲ್ಲಿ ಅದ್ಧೂರಿ ರಥೋತ್ಸವ: ಮೂಲವಿಗ್ರಹಕ್ಕೆ ಸಿಂಹವಾಹಿನಿ ಅಲಂಕಾರ
ರಥೋತ್ಸವ ಮುಗಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು, ದಸರಾ ಹಾಗೂ ಚಾಮುಂಡೇಶ್ವರಿ ರಥೋತ್ಸವ ಸುಸೂತ್ರವಾಗಿ ನಡೆದಿದೆ. ತಾಯಿ ಚಾಮುಂಡೇಶ್ವರಿ ದೇಶದ ಜನತೆಗೆ ಒಳಿತು ಮಾಡಲಿ. ರಥೋತ್ಸವವೂ ದಸರಾದ ಒಂದು ಭಾಗವೇ. ಇದು ಕೂಡ ಅತ್ಯಂತ ಸಡಗರದಿಂದ ಜರುಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇನ್ನು ಇದೇ ವೇಳೆ ಮಾತನಾಡಿದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಪದ್ದತಿಯಂತೆ ಇಂದು ಅಮ್ಮನವರ ರಥೋತ್ಸವ ಜರುಗಿದೆ. ಸರಿಯಾದ ರೀತಿಯಲ್ಲಿ ಸಮಯಕ್ಕೆ ತಕ್ಕಂತೆ ಎಲ್ಲಾ ವಿಧಿ ವಿಧಾನಗಳು ಜರುಗಿವೆ. ನಾಡಿನ ಸಮಸ್ತ ಜನತೆ ಆರೋಗ್ಯ, ಸಮೃದ್ಧಿಯನ್ನು ತಾಯಿ ಚಾಮುಂಡೇಶ್ವರಿ ನೀಡಲಿ ಎಂದು ಹೇಳಿದರು.





