ಮೈಸೂರು : ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಅ.30ರಂದು ಚಿಕ್ಕಮಗಳೂರು ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೊಬೈಲ್ ಫೋನ್ ಮೂಲಕ ಕಾಲೇಜಿನ ಡೀನ್ ವಿರುದ್ಧ ಸವಿತಾ ಸಮಾಜದ ಬಗ್ಗೆ ‘ಹಜಾಮ’ ಎಂಬ ಪದವನ್ನು ಬಳಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ ಣ್ ದೂರು ಸಲ್ಲಿಸಿದ್ದಾರೆ.
ಮೆಡಿಕಲ್ ಕಾಲೇಜಿನ ಡೀನ್ ಅವರನ್ನು ನಿಂದಿಸಿರುವುದು ಕೆಲ ಮಾಧ್ಯಮಗಳಲ್ಲಿ ಹಾಗೂ ಸೋಷಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿದೆ. ಸಿ.ಟಿ.ರವಿ ಅವರು ನಿರಂತರವಾಗಿ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲು ಹೇಳಿಕೆಗಳನ್ನು ನೀಡುವುದಲ್ಲದೆ, ಸಮಾಜದಲ್ಲಿರುವ ಅಸ್ಪೃಶ್ಯ ಜಾತಿಗಳನ್ನು ನಿಂದಿಸುವ ಕೆಲಸ ಮಾಡುತ್ತಿರುತ್ತಾರೆ.
ಇದನ್ನೂ ಓದಿ:-ಸಾಮಾಜಿಕ ಕಾಳಜಿಯುಳ್ಳ ಸಿನಿಮಾ ಕಣ್ಮರೆ : ಸಿ.ಎಂ ವಿಷಾಧ
ನಾನು ಕಾಲೇಜಿಗೆ ಬರುತ್ತೇನೆ ಎಂದು ತಿಳಿಸಿದ್ದರೂ ನೀನು ಇನ್ನೂ ಬಂದಿಲ್ಲವಲ್ಲ, ನಾನೇನು ಸುಮ್ಮನೆ ಬಂದು ಹೋಗಲು ಹಜಾಮನ ಎಂದು ಮೊಬೈಲ್‌ನಿಂದ ಡೀನ್ ಅವರಿಗೆ ನಿಂದಿಸುವುದರ ಮೂಲಕ ಸವಿತಾ ಸಮಾಜವನ್ನು ಕೇವಲವಾಗಿ ಕಾಣುವ ರೀತಿ ಮಾತನಾಡಿದ್ದಾರೆ.
ಈ ಪದ ಬಳಸಲು ಕರ್ನಾಟಕ ರಾಜ್ಯದಲ್ಲಿ ನಿಷೇದವಿದೆ. ಇಂತಹ ಪದ ಬಳಕೆ ಮಾಡುವವರ ವಿರುದ್ಧ ಜಾತಿ ನಿಂದನೆ ಮತ್ತು ಕ್ರಿಮಿನಲ್ ಕೇಸ್ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ. ದಯಮಾಡಿ ಜಾತಿ ನಿಂದನೆ ಕೇಸ್ ದಾಖಲಿಸಿ ಕೂಡಲೇ ಕ್ರಮ ವಹಿಸಬೇಕು ಎಂದು ಕೋರಿ ದೇವರಾಜ ಪೊಲೀಸ್ ಠಾಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.





