ಮೈಸೂರು: ನೋಟಿನಲ್ಲಿ ಗಾಂಧೀಜಿ ಜೊತೆ ಅಂಬೇಡ್ಕರ್ ಅವರ ಫೋಟೋ ಹಾಕಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಅಂದೇ ಪ್ರಧಾನಿಯಾಗಿದ್ದರೆ ದೇಶಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ. ಮುಸ್ಲಿಂಮರ ಮನಸ್ಥಿತಿ ಅಂಬೇಡ್ಕರ್ ಅವರಿಗೆ ಬಹಳ ಚೆನ್ನಾಗಿ ಅರ್ಥವಾಗಿತ್ತು. ಅಂಬೇಡ್ಕರ್ ಅವರೇ ಮುಸ್ಲಿಂಮರ ಮನಸ್ಥಿತಿ ಬಗ್ಗೆ ಬಹಳ ಸ್ಪಷ್ಟವಾಗಿ ಹೇಳಿದ್ದರು ಎಂದ ಸಿಂಹ, ನೋಟ್‌ನಲ್ಲಿ ಅಂಬೇಡ್ಕರ್ ಅವರ ಫೋಟೋವನ್ನು ಗಾಂಧೀಜಿಯ ಜೊತೆಯಲ್ಲಿ ಹಾಕಿ ಎಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಿದರು.
ಬರೀ ಮೀಸಲಾತಿ ದೃಷ್ಟಿಕೋನದಿಂದ ಅಷ್ಟೇ ಅಂಬೇಡ್ಕರ್ ಅವರನ್ನು ನೋಡುವುದನ್ನು ಬಿಡಿ. ಈಗ ಎಲ್ಲರಿಗೂ ಅಂಬೇಡ್ಕರ್ ಅವರ ವಿಶಾಲ ದೃಷ್ಟಿಕೋನ ಅರ್ಥವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೋಟಿನಲ್ಲಿ ಗಾಂಧಿ ಒಬ್ಬರದೇ ಅಲ್ಲ, ಅಂಬೇಡ್ಕರ್ ಫೋಟೋನೂ ಬರಬೇಕು ಎಂದು ಆಗ್ರಹಿಸಿದರು.





