ಮೈಸೂರು: ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳ ಮೇಲೆ ನಿಷೇಧ ಹೇರುವಂತೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವ ವಿಚಾರ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದ್ದು, ಮೈಸೂರಿನಲ್ಲಿಂದು ಐ ಲವ್ ಆರ್‌ಎಸ್‌ಎಸ್ ಅಭಿಯಾನ ನಡೆಯಿತು.
ಮೈಸೂರು ನಗರದ ಚೆಲುವಾಂಬ ಪಾರ್ಕ್‌ನಲ್ಲಿ ಆರ್‌ಎಸ್‌ಎಸ್ ಅಭಿಮಾನಿಗಳು ಹಾಗೂ ಹಿಂದೂ ಪರ ಸಂಘಟನೆಗಳ ಸದಸ್ಯರು ಸಾರ್ವಜನಿಕರ ಮಧ್ಯೆ “ಐ ಲವ್ ಆರ್‌ಎಸ್‌ಎಸ್” ಅಭಿಯಾನ ನಡೆಸಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ಇದನ್ನು ಓದಿ: ಆರ್‌ಎಸ್‌ಎಸ್ ಬಗ್ಗೆ ನಿಮ್ಮ ಖಯಾಲಿ ಬಿಟ್ಟು ನಿಮ್ಮ ಜವಾಬ್ದಾರಿ ನಿರ್ವಹಿಸಿ: ಆರ್.ಅಶೋಕ್
ಈ ಅಭಿಯಾನದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಭಾಗವಹಿಸಿ, ಆರ್‌ಎಸ್‌ಎಸ್ ಸಂಸ್ಥೆಯು ದೇಶಭಕ್ತಿಯನ್ನು ಬೋಧಿಸುವ ಹಾಗೂ ಸಾಮಾಜಿಕ ಏಕತೆಯನ್ನು ಬಲಪಡಿಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಅಭಿಯಾನದಲ್ಲಿ ಯುವಕರು, ಮಹಿಳೆಯರು ಸೇರಿದಂತೆ ಅನೇಕರು ಭಾಗಿಯಾಗಿ “ಐ ಲವ್ ಆರ್‌ಎಸ್‌ಎಸ್” ಬೋರ್ಡ್‌ಗಳನ್ನು ಹಿಡಿದು ನಿಂತು ತಮ್ಮ ಅಭಿಮಾನವನ್ನು ತೋರಿಸಿದರು.





