Mysore
25
broken clouds

Social Media

ಬುಧವಾರ, 26 ಆಗಸ್ಟ್ 2026
Light
Dark

ಚಿರತೆ ದಾಳಿ : ರೈತನಿಗೆ ಗಾಯ

ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ರಾಜಶೇಖರ ಮೂರ್ತಿ ಎಂಬುವವರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದ್ದು, ಅದೃಷ್ಟವಶಾತ್ ರೈತ ಪರಾಗಿರುವ ಘಟನೆ ಗುರುವಾರ ರಾತ್ರಿ 10:30ರಲ್ಲಿ ನಡೆದಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಗಾಯಾಳುವನ್ನು ಕರೆದೊಯ್ಯಲಾಗಿದೆ.

ಗುರುವಾರ ರಾತ್ರಿ 10.30 ರ ಸಮಯದಲ್ಲಿ ಜಮೀನಿನಲ್ಲಿ ಅರಿಶಿನ ಬೇಯಿಸಿ ಒಣಗಲು ಹಾಕಿರುವುದನ್ನು ನೋಡಲು ತೆರಳುವಾಗ ಚಿರತೆ ಬೈಕ್ ಮೇಲೆ ತೆರಳುತಿದ್ದ ರಾಜಶೇಖರ ಮುರ್ತಿ ಎಂಬುವವರ ಮೇಲೆ ದಾಳಿ ನಡೆಸಿದೆ, ತಕ್ಷಣ ಬೈಕ್ ನಿಂದ ಬಿದ್ದು ಬೈಕ್ ಹಾರನ್ ಒತ್ತಿ ಹಿಡಿದಿದ್ದು ಶಬ್ದಕ್ಕೆ ಚಿರತೆ ಓಡಿ ಹೋಗಿದೆ ಎಂದು ಗಾಯಾಳು ರೈತ ತಿಳಿಸಿದ್ದಾರೆ.

ಈ ವಿಚಾರವಾಗಿ ಎಸಿಎಫ್ ಸುರೇಶ್ ಕುಮಾರ್ ಮಾತನಾಡಿ, ಡ್ರೋನ್‌ ಮೂಲಕ ಚಿರತೆ ಪರಿಶೀಲನೆ ನಡೆಸಲಾಗುವುದು. ನಮ್ಮ ಸಿಬ್ಬಂದಿಗಳು ಕೂಂಬಿಂಕ್ ಕೂಡ ನಡೆಸುತಿದ್ದಾರೆ. ಬೋನ್ ಕೂಡ ಇರಿಸಲಾಗುವುದು ಗಾಯಗೊಂಡ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುವುದು ಎಂದರು.

ಈ ಬಗ್ಗೆ ಗ್ರಾಮದ ವಿಜಯ್ ಮಾತನಾಡಿ, ನಮ್ಮ ಗ್ರಾಮದ ಸುತ್ತಮುತ್ತ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದ್ದು ಕೆಲವು ದಿನಗಳಿಂದ ಕುರಿ ಹಾಗೂ ಜಾನುವಾರುಗಳ ಮೆಲೆ ದಾಳಿ ನಡೆಸಿ ಕೊಂದು ಹಾಕಿದೆ. ಕೂಡಲೆ ಅರಣ್ಯ ಇಲಾಖೆ ಕ್ರಮ ವಹಿಸುವಂತೆ ಒತ್ತಾಯಿಸಿದರು.

 

ಸುದ್ದಿ ವರದಿ : ಮಹೇಂದ್ರ ಹಸಗೂಲಿ, ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು

Tags:
error: Content is protected !!