Mysore
22
broken clouds

Social Media

ಮಂಗಳವಾರ, 25 ಆಗಸ್ಟ್ 2026
Light
Dark

ಬೈಕ್‌ ಓಡಿಸುತ್ತಿರುವಾಗಲೇ ಸವಾರನಿಗೆ ಹೃದಯಾಘಾತ

ಮೈಸೂರು: ಬೈಕ್‌ ಓಡಿಸುತ್ತಿರುವಾಗಲೇ ಸವಾರನಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಬೋಗಾದಿ ರಿಂಗ್‌ ರಸ್ತೆಯಲ್ಲಿ ನಡೆದಿದೆ.

ಚಾಮರಾಜನಗರ ತಾಲ್ಲೂಕಿನ ನಂಜೇದೇವರಪುರದ ರವಿ ಎಂಬುವವರೇ ಮೃತ ದುರ್ದೈವಿಯಾಗಿದ್ದಾರೆ. ಬೈಕ್‌ ಓಡಿಸಿಕೊಂಡು ಬರುತ್ತಿದ್ದ ವೇಳೆ ಏಕಾಏಕಿ ಹೃದಯಾಘಾತವಾಗಿದ್ದು, ಕೆಳಗೆ ಬಿದ್ದಿದ್ದಾರೆ.

ರವಿ ಅವರು ಬೈಕ್‌ನಿಂದ ಕೆಳಗೆ ಬೀಳುವ ದೃಶ್ಯ ಹತ್ತಿರಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ರವಿಗೆ ಹಾರ್ಟ್‌ ಅಟ್ಯಾಕ್ ಆಗುತ್ತಿದ್ದಂತೆ ನಿಯಂತ್ರಣ ತಪ್ಪಿದ ಬೈಕ್‌, ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ ಸವಾರ ರವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಕುವೆಂಪುನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:
error: Content is protected !!