ಮೈಸೂರು : ಹುಲಿಗಳ ದಾಳಿ ನಿಯಂತ್ರಣಕ್ಕೆ ರಾಜ್ಯಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು. ವನ್ಯಜೀವಿಗಳನ್ನು ಸಂರಕ್ಷಿಸುವ ಜತೆಗೆ, ಮಾನವನ ಜೀವವನ್ನು ಉಳಿಸಬೇಕಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಅಕ್ರಮ ರೆಸಾರ್ಟ್‌ಗಳಿಂದ ಹಾಗೂ ಸಫಾರಿ ಹೆಚ್ಚಳದಿಂದ ಹುಲಿಗಳ ದಾಳಿಯಾಗುತ್ತಿದೆ ಎಂಬುದಕ್ಕೆ ಲಿಂಕ್ ಕೊಡುವುದಿಲ್ಲ. ರೆಸಾರ್ಟ್‌ಗಳ ನಿರ್ಮಾಣದಿಂದ ಪ್ರಕೃತಿಯ ಮೇಲೆ ಪರಿಣಾಮ ಬೀರಬಹುದು ಹೊರತು ದಾಳಿಗೆ ಸಂಪರ್ಕವಿಲ್ಲ ಎಂದರು.
ಇದನ್ನು ಓದಿ: ಮೈಸೂರು ಭಾಗದಲ್ಲಿ ನಿರಂತರ ಹುಲಿ ದಾಳಿ ಪ್ರಕರಣ: ಅನ್ನದಾತರ ಆಕ್ರೋಶ
ಬಂಡೀಪುರ ಅರಣ್ಯ ಪ್ರದೇಶವು ಒಂದು ಸಾವಿರ ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಆದರೆ,ಸಫಶರಿ ನಡೆಯುತ್ತಿರುವುದು ೧೫೦ ಚದರ ಕಿ.ಮೀ ವ್ಯಾಪ್ತಿಯಲ್ಲಿ ಮಾತ್ರವಾಗಿದೆ. ನಾವು ಹುಲಿಗಳು ಕಾಡಿನಿಂದ ನಾಡಿಗೆ ಯಾಕೇ ಬರುತ್ತಿದೆ ಎಂಬುದನ್ನು ಗಮನಿಸಬೇಕು. ನಿಯಂತ್ರಣಕ್ಕೆ ಗಮನಹರಿಸಬೇಕು ಎಂದರು.
ಹುಲಿ ದಾಳಿಗಳ ನಿಯಂತ್ರಣಕ್ಕೆ ಪರಿಹಾರಗಳು ಸಾಕಷ್ಟು ಇವೆ. ಈ ವಿಚಾರ ಅಧಿಕಾರಿಗಳಿಗೂ ಗೊತ್ತಿರುತ್ತದೆ ಎಂದರು. ಅನಾದಿ ಕಾಲದಿಂದಲೂ ಬುಡಕಟ್ಟು ಜನರು ಕಾಡಿನಂಚಿನಲ್ಲಿ ವಾಸ ಮಾಡುತ್ತಿರುತ್ತಾರೆ. ಸಫಾರಿ ಕೂಡ ನಡೆಯುತ್ತಿದೆ. ಹಾಗಾಗಿ, ನಾವು ಅರಣ್ಯ ಉಳಿಸಲು ಪ್ರಯತ್ನ ಮಾಡಬೇಕಿದೆ ಎಂದು ಸಲಹೆ ನೀಡಿದರು.





